ಕರ್ನಾಟಕ

karnataka

ETV Bharat / state

​​​​​​ಆವೇಶದಲ್ಲಿ ಪೊಲೀಸರನ್ನು ನಿಂದಿಸಿದ್ದೆ, ಅದಕ್ಕಾಗಿ ಕಮಿಷನರ್​ ಕ್ಷಮೆ ಕೇಳಿದ್ದೇನೆ: ಸಂಸದ ಪ್ರತಾಪಸಿಂಹ - ಪೊಲೀಸರಿಗೆ ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ

ಪೊಲೀಸ್​ ಕಮಿಷನರ್​ ಹಾಗೂ ಡಿಸಿಪಿ ಅವರ ಬಳಿ ಖುದ್ದಾಗಿ ಕ್ಷಮೆಯಾಚಿಸಿದ್ದೇನೆ. ಚಾಮುಂಡೇಶ್ವರಿ ದೇವಿಗೆ ಅಪಚಾರ ಮಾಡುವ ಕಾರ್ಯಕ್ರಮವಾಗಿದ್ದರಿಂದ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಸಂಸದ ಪ್ರತಾಪ್ ಸಿಂಹ್

By

Published : Oct 9, 2019, 1:49 PM IST

ಮೈಸೂರು: ಆವೇಶದಲ್ಲಿ ಹಾಗೇ ಹೇಳಿದ್ದರಿಂದ ಪೊಲೀಸ್​ ಕಮಿಷನರ್​ ಹಾಗೂ ಡಿಸಿಪಿ ಅವರನ್ನು ಖುದ್ದಾಗಿ ಭೇಟಿ ನೀಡಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್​ಸಿಂಹ ಹೇಳಿದರು.

ಸಂಸದ ಪ್ರತಾಪ್ ಸಿಂಹ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಅದಿದೇವತೆ, ಶಕ್ತಿ ದೇವತೆ ಎಂದು ಚಾಮುಂಡೇಶ್ವರಿಯನ್ನು ಕರೆಯುವ ನಾವು, ದೇವಿಯ ಬಗ್ಗೆ ಹಗುರವಾಗಿ ಮಾತನಾಡಲು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮವನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇನೆ ಎಂದರು.

ಮಹಿಷ ದಸರಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದಾಗ ಆಕ್ರೋಶದಿಂದ ಪೊಲೀಸರಿಗೆ ನಿಂದಿಸಿದ್ದು ನಿಜ. ಮಹಿಷ ದಸರಾ ಆಚರಣೆಯಿಂದ ಜನರಿಗೆ ಬೇಸರ ಉಂಟಾಗುತ್ತದೆ ಎಂದರು.

ABOUT THE AUTHOR

...view details