ಕರ್ನಾಟಕ

karnataka

ETV Bharat / state

ವಾರಾಂತ್ಯ, ರಾತ್ರಿ ನಿಷೇಧಾಜ್ಞೆಯಿಂದ ಸಂಕಷ್ಟ: ನಾಳೆಯಿಂದ ಚಿತ್ರಮಂದಿರಗಳು ಬಂದ್​ - covid night curfew

ಚಿತ್ರಮಂದಿರದಲ್ಲಿ 50-50ರ ಆಸನ ಅವಕಾಶ ನೀಡಿದ್ದು, ಬರುವ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಈ ನಿಯಮಗಳನ್ನು ಪಾಲಿಸಿ ಚಿತ್ರಮಂದಿರ ನಡೆಸಲು ಬಹಳ ಕಷ್ಟವಾಗುತ್ತಿದೆ. ಹೀಗಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಚಿತ್ರಮಂದಿರ ಮಾಲೀಕರ ಸಂಘ ತಿಳಿಸಿದೆ.

movie-theaters-to-close-from-tomorrow-in-mysuru
ಚಿತ್ರಮಂದಿರಗಳು ಬಂದ್​

By

Published : Jan 20, 2022, 6:08 PM IST

ಮೈಸೂರು:ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾರಾಂತ್ಯ ಹಾಗೂ ರಾತ್ರಿ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಇದರಿಂದ ಥಿಯೇಟರ್‌ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಾಳೆಯಿಂದ ಮೈಸೂರಿನಲ್ಲಿ ಚಲನಚಿತ್ರ ಮಂದಿರಗಳನ್ನು ಬಂದ್ ಮಾಡಲು ಚಿತ್ರಮಂದಿರ ಮಾಲೀಕರ ಸಂಘ ನಿರ್ಧರಿಸಿದೆ.

ರಾಜ್ಯದಲ್ಲಿ ವಾರಾಂತ್ಯ ಹಾಗೂ ರಾತ್ರಿ ನಿಷೇಧಾಜ್ಞೆ ಜೊತೆಗೆ ಸಿನಿಮಾ ಮಂದಿರ, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ವಾಣಿಜ್ಯ ವಹಿವಾಟಿಗೆ ಶೇ. 50-50ರ ಅವಕಾಶ ನೀಡಲಾಗಿದೆ. ಇದರಿಂದ ಥಿಯೇಟರ್‌ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾರಾಂತ್ಯ ಹಾಗೂ ರಾತ್ರಿ ನಿಷೇಧಾಜ್ಞೆ ಆದೇಶ ತೆರವು ಮಾಡುವವರೆಗೂ ನಗರದಲ್ಲಿ ಥಿಯೇಟರ್​ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಚಿತ್ರಮಂದಿರ ಮಾಲೀಕರ ಸಂಘ ತಿಳಿಸಿದೆ.

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ವಾರದ ಅಂತ್ಯದಲ್ಲಿ ಅಂದರೆ ಶುಕ್ರವಾರ, ಶನಿವಾರ ಮತ್ತು ಭಾನುವಾರವೇ ಚಿತ್ರಮಂದಿರಗಳಿಗೆ ಹೆಚ್ಚು ಜನರು ಬರುತ್ತಾರೆ. ಆದರೆ ಆವಾಗಲೇ ನಿಷೇಧಾಜ್ಞೆ ಹೇರಲಾಗಿದೆ. ಇದಲ್ಲದೇ ನೈಟ್ ಕರ್ಫ್ಯೂ ಸಹ ಇರುವುದರಿಂದ ರಾತ್ರಿಯ ಪ್ರದರ್ಶನಕ್ಕೂ ಅವಕಾಶ ಇಲ್ಲ. ಜೊತೆಗೆ ಚಿತ್ರಮಂದಿರದಲ್ಲಿ 50-50ರ ಆಸನ ಅವಕಾಶ ನೀಡಿದ್ದು, ಬರುವ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಈ ನಿಯಮಗಳನ್ನು ಪಾಲಿಸಿ ಚಿತ್ರಮಂದಿರ ನಡೆಸಲು ಬಹಳ ಕಷ್ಟವಾಗುತ್ತಿದೆ. ಹೀಗಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಚಿತ್ರಮಂದಿರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಾರಾಂ ತಿಳಿಸಿದ್ದಾರೆ.

ಇದನ್ನೂ ಓದಿ:2021-22ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ABOUT THE AUTHOR

...view details