ಮೈಸೂರು: ಮನೆಯ ಸಂಪ್ಗಳಲ್ಲಿ ಅಳವಡಿಸಿದ್ದ ಮೋಟಾರ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದು, ಆತನಿಂದ 11 ಮೋಟಾರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಂಪ್ಗಳಲ್ಲಿ ಮೋಟಾರ್ ಕಳ್ಳತನ: ಆರೋಪಿಯ ಬಂಧನ!
ಮನೆಯ ಸಂಪ್ಗಳಲ್ಲಿ ಅಳವಡಿಸಿದ್ದ ಮೋಟಾರ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮೊಹಮ್ಮದ್ ಸಲೀಂ (29) ಈತ ನಗರದ ಶಾಂತಿ ನಗರದ ನಿವಾಸಿಯಾಗಿದ್ದು, ಈತ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ ಸಂಪ್ಗಳಲ್ಲಿ ಅಳವಡಿಸಿದ್ದ ನೀರಿನ ಮೋಟಾರ್ಗಳನ್ನು ಕದಿಯುತ್ತಿದ್ದು, ಬೀಟ್ನಲ್ಲಿದ್ದ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೋಟಾರ್ ಕದಿಯುತ್ತಿರುವುದಾಗಿ ಒಪ್ಪಿಕೊಂಡಿದ್ದು, ಈತನಿಂದ ಸುಮಾರು 50,000 ಬೆಲೆಬಾಳುವ 11 ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ 4 ಪ್ರಕರಣ ಹಾಗೂ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಮೋಟಾರ್ ಕಳ್ಳನನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.