ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಕಾರಿನ ಟೈರ್​ ಸ್ಫೋಟಗೊಂಡು ತಾಯಿ-ಮಗ ಸ್ಥಳದಲ್ಲೇ ದುರ್ಮರಣ - ಇಂದಿನ ಕ್ರೈಂ ಸುದ್ದಿಗಳು

ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಕಾರಿನ ಟೈರ್​ ಸ್ಫೋಟಗೊಂಡ ಪರಿಣಾಮ ತಾಯಿ-ಮಗ ಮೃತಪಟ್ಟ ದಾರುಣ ಘಟನೆ ನಡೆದಿದೆ.

Mother and Son Death In Road Accident At Mysore
Mother and Son Death In Road Accident At Mysore

By

Published : Oct 6, 2021, 1:37 PM IST

ಮೈಸೂರು:ಕಾರಿನ ಟೈರ್​ ಸ್ಫೋಟಗೊಂಡಿದ್ದು ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಗುಣಲಕ್ಷ್ಮಿ (35) ಹಾಗೂ ದೈವಿಕ್ (12) ಮೃತರು.

ಕಾರು ಚಾಲನೆ ಮಾಡುತ್ತಿದ್ದ ಮೃತ ಗುಣಲಕ್ಷ್ಮಿಯವರ ಪತಿ ಜಗದೀಶ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗದೀಶ್ ಕಾರು ಚಾಲನೆ ಮಾಡಿಕೊಂಡು ಪತ್ನಿ ಗುಣಲಕ್ಷ್ಮಿ ಹಾಗೂ ಪುತ್ರ ದೈವಿಕ್ ಜೊತೆಯಲ್ಲಿ ಮುಂಜಾನೆ 4.30ರ ಸಮಯದಲ್ಲಿ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದರು.


ಈ ವೇಳೆ ಟೈರ್ ಸ್ಫೋಟಗೊಂಡು ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಹೀಗಾಗಿ, ತಾಯಿ ಮತ್ತು ಮಗ ಕಾರಿನಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಕುವೆಂಪು ನಗರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details