ಮೈಸೂರು: 200ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದ ಶ್ವಾನ ಲಕ್ಕಿ ಅನಾರೋಗ್ಯದಿಂದ ಇಂದು ಮೃತಪಟ್ಟಿದೆ. ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಕಿ(7) ಹೆಣ್ಣು ಶ್ವಾನವು ಮೃತಪಟ್ಟಿದೆ.
ಉಸಿರು ನಿಲ್ಲಿಸಿದ ಪೊಲೀಸ್ ಇಲಾಖೆಯ ಕಂಚಿನ ಪದಕ ವಿಜೇತ ‘ಲಕ್ಕಿ’...! - District Superintendent of Police C. B. Rishyant
ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಡಿಎಆರ್ ಡಿಎಸ್ಪಿ ಸತೀಶ್ ಹಾಗೂ ಶ್ವಾನದಳದ ಅಧಿಕಾರಿಗಳು, ಸಿಬ್ಬಂದಿ, ಶ್ವಾನ ಲಕ್ಕಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು..
ಉಸಿರು ನಿಲ್ಲಿಸಿದ ಪೊಲೀಸ್ ಇಲಾಖೆಯ ಕಂಚಿನ ಪದಕ ವಿಜೇತ ‘ಲಕ್ಕಿ’...!
'ಲಕ್ಕಿ' ಶ್ವಾನವು ಸುಮಾರು 200ಕ್ಕೂ ಹೆಚ್ಚು ಸ್ಪೋಟ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, 2018ರ ಪೊಲೀಸ್ ಕರ್ತವ್ಯ ಕೂಟದಲ್ಲಿ ಕಂಚಿನ ಪದಕ ಪಡೆದುಕೊಂಡಿತ್ತು.
ಲಕ್ಕಿಗೆ ಪೊಲೀಸರು ಗೌರವ ವಂದನೆ ಸಲ್ಲಿಸುವ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಡಿಎಆರ್ ಡಿಎಸ್ಪಿ ಸತೀಶ್ ಹಾಗೂ ಶ್ವಾನದಳದ ಅಧಿಕಾರಿಗಳು, ಸಿಬ್ಬಂದಿ, ಶ್ವಾನ ಲಕ್ಕಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಿದರು.