ಮೈಸೂರು: ಕರ್ನಾಟಕದ ವಿವಿಧ ಮೃಗಾಲಯಗಳಿಗೆ ಹತ್ತೇ ದಿನದಲ್ಲಿ ದಾನಿಗಳು ಹಾಗೂ ದತ್ತು ಸ್ವೀಕಾರದಿಂದ 1.50 ಕೋಟಿ ರೂ. ಹರಿದು ಬಂದಿದೆ. ಕೊರೊನಾದಿಂದಾಗಿ ಮೃಗಾಲಯದಲ್ಲಿನ ಪ್ರಾಣಿಗಳ ಮೇಲ್ವಿಚಾರಣೆ ಕಷ್ಟಕರವಾಗಿತ್ತು. ಈ ಹಿನ್ನೆಲೆ ದಾನಿಗಳು ನೆರವಿಗೆ ಧಾವಿಸಿದ್ದು, 1 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.
ಮೈಸೂರು ಮೃಗಾಲಯಕ್ಕೆ 75,97,600 ರೂ., ಬನ್ನೇರುಘಟ್ಟ ಮೃಗಾಲಯಲಕ್ಕೆ 46,46,700 ರೂ., ಶಿವಮೊಗ್ಗಕ್ಕೆ 9,69,800 ಲಕ್ಷ ರೂ., ಗದಗ ಮೃಗಾಲಯಕ್ಕೆ 4,21,100 ರೂ., ಬೆಳಗಾವಿ ಮೃಗಾಲಯಕ್ಕೆ 3,82,800 ರೂ., ಹಂಪಿ 3,77,900 ರೂ., ದಾವಣಗೆರೆ 3,56,300 ರೂ, ಚಿತ್ರದುರ್ಗ ಮೃಗಾಲಯಕ್ಕೆ 2,19,200 ರೂ., ಕಲಬುರ್ಗಿ ಮೃಗಾಲಯಕ್ಕೆ 1,70,300 ಸೇರಿದಂತೆ ಒಟ್ಟಾರೆ ಕರ್ನಾಟಕ 9 ಮೃಗಾಲಯಗಳಿಗೆ 5,842 ದಾನಿಗಳು ಹಾಗೂ ದತ್ತು ಸ್ವೀಕಾರ ಮಾಡಿದವರಿಂದ 1,51,41,700 ರೂ.ಸಂಗ್ರಹವಾಗಿದೆ.