ಮೈಸೂರು:ಮಹಾತ್ಮ ಗಾಂಧೀಜಿ ಜೊತೆ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ತಮ್ಮದೇದೇ ಛಾಪು ಮೂಡಿಸಿದ್ದ 'ಮೈಸೂರುಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ತಗಡೂರು ರಾಮಚಂದ್ರರಾವ್ರವರ ಮನೆಯನ್ನು ಸ್ಮಾರಕ ಮಾಡಬೇಕೆಂಬ ಮನವಿಗೆ ಇದೀಗ ಸ್ಪಂದನೆ ದೊರೆತಿದೆ.ಇದು ಈಟಿವಿ ಭಾರತ ಫಲಶ್ರುತಿ.
'ಮೈಸೂರು ಗಾಂಧಿ'ಗೆ ಸದ್ಯದಲ್ಲಿಯೇ ಸ್ಮಾರಕ...ಇದು ಈಟಿವಿ ಭಾರತ್ ಫಲಶೃತಿ - ತಗಡೂರು ರಾಮಚಂದ್ರರಾವ್ ಮನೆಯ ಸ್ಮಾರಕಕ್ಕೆ ಮನವಿ
'ಮೈಸೂರುಗಾಂಧಿ' ಎಂದೇ ಪ್ರಸಿದ್ಧಿ ಪಡೆದ ತಗಡೂರು ರಾಮಚಂದ್ರರಾವ್ರವರ ಮನೆಯನ್ನು ಸ್ಮಾರಕ ಮಾಡಬೇಕೆಂಬ ಮನವಿಗೆ ಸ್ಪಂದನೆ ದೊರೆತಿದೆ.ಇದು ಈಟಿವಿ ಭಾರತ ಫಲಶ್ರುತಿ.

ನೂಲುವ ಯಂತ್ರದ ಮೂಲಕ ಸ್ವದೇಶಿ ಚಳುವಳಿಗೆ ಸಹಕಾರ ನೀಡಿ, ಮಹಾತ್ಮ ಗಾಂಧೀಜಿಯವರನ್ನು ಅಂದಿನ ಮೈಸೂರು ರಾಜ್ಯಕ್ಕೆ ಬರುವಂತೆ ಮಾಡಿದ 'ಮೈಸೂರು ಗಾಂಧಿ' ಎಂಬ ಖ್ಯಾತಿ ಹೊಂದಿದ್ದ ತಗಡೂರು ರಾಮಚಂದ್ರರಾವ್ ರವರ ಮನೆ ಸ್ಮಾರಕವಾಗಿ ನಿರ್ಮಾಣವಾಗಲಿದೆ.ಈ ಕುರಿತಂತೆ ಸೆ.23ರಂದು 'ಮೈಸೂರು ಗಾಂಧಿಗೆ ಏಕಿಲ್ಲ ಸ್ಮಾರಕ ಭಾಗ್ಯ' ಎಂಬ ಶೀರ್ಷಿಕೆಯಡಿ 'ಈಟಿವಿ ಭಾರತ್' ವಿಸ್ತೃತ ವರದಿ ಮಾಡಿತ್ತು.ಇಲ್ಲಿವರೆಗೆ ಮರೀಚಿಕೆಯಾಗಿದ್ದ ರಾಮಚಂದ್ರರಾವ್ ಮನೆಯನ್ನು ಸ್ಮಾರಕ ಮಾಡಬೇಕೆಂಬ ಮನವಿ ಈಟಿವಿ ಭಾರತ ವರದಿ ನಂತರ ಕೈಗೂಡಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಖಾದಿ ಗ್ರಾಮೋದ್ಯೋಗಾಧಿಕಾರಿ ಸತ್ಯ ಪ್ರೇಮಕುಮಾರಿ ಅವರು, ತಡಗೂರು ರಾಮಚಂದ್ರರಾವ್ ಅವರ ಮನೆಯನ್ನು ಹಾಗಯೇ ಉಳಿಸಿಕೊಂಡು 10 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು. ಇನ್ನು ತಡಗೂರು ರಾಮಚಂದ್ರರಾವರ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಸಮಾಧಿ ಕಟ್ಟಿ ಅದರ ಮೇಲೆ ಅವರ ಸಾಧನೆಯನ್ನು ಕಿರಿದಾಗಿ ಬರೆಯಲಾಗುವುದು ಎಂದು ತಿಳಿಸಿದ್ರು.