ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕೋತಿಗಳ ಹಾವಳಿ ವಿಪರೀತವಾಗಿದ್ದು ದೇವಾಲಯಕ್ಕೆ ಬರುವ ಭಕ್ತರ ಬ್ಯಾಗ್ ಗಳನ್ನೇ ಕಿತ್ತುಕೊಂಡು ಆಟ ಆಡಿಸುತ್ತಿವೆ.
ಚಾಮುಂಡಿ ಬೆಟ್ಟದಲ್ಲಿ ಮಂಗಗಳ ಕಾಟ... ಕಪಿಚೇಷ್ಟೆಗೆ ಕಂಗಾಲಾದ ಭಕ್ತರು - undefined
ಚಾಮುಂಡಿ ಬೆಟ್ಟದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಬ್ಯಾಗ್ ಕಿತ್ತುಕೊಂಡು ಆಟ ಆಡಿಸುತ್ತಿವೆ

ಚಾಮುಂಡಿ ಬೆಟ್ಟದಲ್ಲಿ ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ ಇಂತಹ ಸಂದರ್ಭದಲ್ಲಿ ಕೋತಿಗಳ ಚೇಷ್ಟೆಯು ಸಹ ಹೆಚ್ಚಾಗಿದ್ದು, ಭಕ್ತರೊಬ್ಬರು ಪೂಜೆ ಮಾಡಿಸಿಕೊಂಡು ದೇವಸ್ಥಾನದ ಮುಂಭಾಗದಲ್ಲಿ ತಾವು ಬ್ಯಾಗ್ ಅನ್ನು ಮೆಟ್ಟಿಲನ ಮೇಲೆ ಇಟ್ಟು ನೀರನ್ನು ಕುಡಿಯಲು ಮುಂದಾದಾಗ ತಕ್ಷಣ ಕೋತಿಯೊಂದು ದೇವಸ್ಥಾನದ ಗೋಪುರದಿಂದ ಇಳಿದು ಆ ಬ್ಯಾಗ್ ಅನ್ನು ಹೊತ್ತುಕೊಂಡು ಗೋಪುರ ಏರಿತು.
ಆ ಬ್ಯಾಗ್ ನಲ್ಲಿ ಮೊಬೈಲ್ , ಹಣ ಎಲ್ಲವೂ ಇತ್ತು ನಂತರ ಗೋಪುರದ ಮೇಲೆ ಆ ಬ್ಯಾಗ್ ಅನ್ನು ತೆಗೆದು ನೋಡಿದ ಕೋತಿ ಹಣ್ಣು ಇಲ್ಲದಿದ್ದರಿಂದ ಸಿಟ್ಟಿಗೆದ್ದು ಬ್ಯಾಗ್ ಉಲ್ಟಾ ಮಾಡಿ ಹಣ ಮತ್ತು ಮೊಬೈಲ್ ಅನ್ನು ಕೆಳಗೆ ಚೆಲ್ಲಾಡಿತು ಆ ಸಂದರ್ಭದಲ್ಲಿ ಸ್ಥಳೀಯ ಯುವಕ ಗೋಪುರವೇರಿ ಎರಡು ಬಾಳೆಹಣ್ಣು ನೀಡಿದಾಗ ಕೋತಿ ಆ ಬ್ಯಾಗ್ ಅನ್ನು ಕೆಳಗೆ ಬಿಸಾಡಿದೆ. ಕೋತಿಗಳ ಕಾಟದಿಂದ ಬೇಸರಗೊಂಡಿರುವ ಭಕ್ತರು ಕೂಡಲೇ ಕೋತಿಗಳನ್ನು ಸುರಕ್ಷಿತ ಸ್ಥಳಗಳಿಗೆ ಹಿಡಿದು ಬಿಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.