ಮೈಸೂರು:ಹಿಂದೆದೆಹಲಿಯಲ್ಲಿ ನಡೆದಿದ್ದ ರೈತ ಹೋರಾಟದಿಂದ ಎಲ್ಲ ತಲೆಮಾರಿನ ಜನರನ್ನು ಒಳಗೊಳ್ಳುವುದನ್ನು ಸಂಘಟನೆ ಕಲಿಯಬೇಕು. ಮಾಧ್ಯಮಗಳನ್ನು ನಂಬಿ ಹೋರಾಟ ಮಾಡಬಾರದು. ಯುವ ಸಮೂಹದ ಕೌಶಲಗಳನ್ನು ಗಮನಿಸಿ ಹೋರಾಟಕ್ಕೆ ಬಳಸಿಕೊಳ್ಳಬೇಕು ಎಂದು ಜೆಎನ್ಯು ವಿವಿಯ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಪ್ರೊ. ಪುರುಷೋತ್ತಮ್ ಬಿಳಿಮಲೆ ಹೇಳಿದರು.
ನಗರದ ಕುವೆಂಪುನಗರದ ಜನ ಚೇತನ ಗ್ರಾಮೀಣ ಟ್ರಸ್ಟ್ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಯುವ ಘಟಕದ ಸಹಯೋಗದಲ್ಲಿ ನಡೆದ ನವ ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ರೈತ ಸಂಘ ಸ್ಥಾಪಿಸಿರುವ ಯುವ ಘಟಕ ಜವಾಬ್ದಾರಿ ಹೆಚ್ಚಿದ್ದು, ಹೋರಾಟದಿಂದ ಕಾಣೆಯಾಗಿರುವ ತಲೆಮಾರನ್ನು ಚಳವಳಿಗೆ ತರಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಮಾಡಿದ್ದೇ ಬಿಜೆಪಿ ಸೋಲಿಗೆ ಕಾರಣ. ಸೋತರು ಕೂಡ ಬಿಜೆಪಿ ಅವರಿಗೆ ಬುದ್ಧಿ ಬಂದಿಲ್ಲ. ಅನ್ಯ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನಿರಾಕರಣೆ ಮಾಡಿದರೇ ರಾಜ್ಯ ಸರ್ಕಾರಗಳು ಅಕ್ಕಿ ಇಲ್ಲವೆಂದು ಹೇಳುತ್ತಿರುವುದು ಆತಂಕದ ಸಂಗತಿ ಎಂದು ತಿಳಿಸಿದರು.
ಬಡವರ ಹಸಿವನ್ನು ನೀಗಿಸುವುದೇ ಹೇಗೆ?ಕಾಂಗ್ರೆಸ್ ಸರ್ಕಾರ ಘೋಷಿಸಿರುವ 5 ಗ್ಯಾರಂಟಿಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡಲು ನಿರಾಕರಣೆ ಮಾಡಿತು. ರಾಜ್ಯ ಸರ್ಕಾರ ನಮ್ಮಲ್ಲಿಯೂ ಅಕ್ಕಿ ಇಲ್ಲವೆನ್ನುತ್ತಿದೆ. ಹಾಗಾದರೇ ಬಡವರ ಹಸಿವನ್ನು ನೀಗಿಸುವುದೇ ಹೇಗೆ? ನಮ್ಮ ನಾಡಿನಲ್ಲಿ ಅಕ್ಕಿ ಸಮಸ್ಯೆ ಇದೆಯೇ. ರಾಜ್ಯದಲ್ಲಿ ಶೇ.40ರಷ್ಟು ಕೃಷಿ ಭೂಮಿಯನ್ನು ಹೊಂದಿದೆ ಎನ್ನುತ್ತಾರೆ. ಕೃಷಿಯ ಬೆಳೆಯ ಉತ್ಪನ್ನಗಳ ಹೆಚ್ಚಾಗಿದೆ. ರಾಜ್ಯ ಸರ್ಕಾರ ಕೃತಕವಾಗಿ ಅಕ್ಕಿಯನ್ನು ಶೇಖರಿಸಿಕೊಂಡಿಲ್ವಾ? ಎಂದು ಪ್ರಶ್ನಿಸಿದರು.