ಕರ್ನಾಟಕ

karnataka

ETV Bharat / state

ಏ.9ಕ್ಕೆ ಸಾಂಸ್ಕೃತಿಕ ನಗರಿಗೆ ಮೋದಿ.. ಹಳೇ ಮೈಸೂರು ಭಾಗದಲ್ಲಿ ಹೊಸ ಸಂಚಲನ - ಮಂಡಕಳ್ಳಿ ವಿಮಾನ ನಿಲ್ದಾಣ

ಏ.9ಕ್ಕೆ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಇಂದು ಎಸ್​ಪಿಜಿ ತಂಡವು ಮಹಾರಾಜ ಕಾಲೇಜು ಮೈದಾನದಲ್ಲಿ ಪರಿಶೀಲನೆ ನಡೆಸಿದೆ

ಳ ಪರಿಶೀಲನೆ ಮಾಡುತ್ತಿರುವ ಎಸ್​ಪಿಜಿ ತಂಡ

By

Published : Apr 6, 2019, 1:59 PM IST

ಮೈಸೂರು:ಹಳೇ ಮೈಸೂರು ಭಾಗದ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡಲು ಪ್ರಧಾನಿ ಮೋದಿ ಅವರು ಏ.9 ರಂದು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಎಸ್​ಪಿಜಿ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಳ ಪರಿಶೀಲನೆ ಮಾಡುತ್ತಿರುವ ಎಸ್​ಪಿಜಿ ತಂಡ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಏ.9 ರಂದು ನಡೆಯಲ್ಲಿರುವ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಗಣ್ಯರು, ರಾಜಕಾರಣಿಗಳು, ಸಾರ್ವಜನಿಕರು ಕುಳಿತುಕೊಳ್ಳಲು ಸ್ಥಳ ಪರಿಶೀಲನೆ ನಡೆಸಿದರು‌. ಅಲ್ಲದೇ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಂದ ಸ್ಥಳದ ಮಾಹಿತಿ ಹಾಗೂ ಮಹಾರಾಜ ಕಾಲೇಜಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಇರುವ ಮಾರ್ಗಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಶುಕ್ರವಾರದಿಂದ ನಗರದಲ್ಲಿ ಬೀಡುಬಿಟ್ಟಿರುವ ಎಸ್​ಪಿಜಿ ತಂಡ ಮೋದಿ ಬಂದು ಹೋದ ನಂತರ ಅವರು ಕೂಡ ಹೊರಡಲಿದ್ದಾರೆ.

ABOUT THE AUTHOR

...view details