ಮೈಸೂರು: ಮೈತ್ರಿ ಅಭ್ಯರ್ಥಿ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆಯ ಹೊರಗೆ ಯುವಕರ ಗುಂಪೊಂದು ಮೋದಿಗೆ ಜಯಕಾರ ಹಾಕಿದೆ ಘಟನೆ ಕಡಕೋಳದಲ್ಲಿ ನಡೆದಿದೆ.
ಸಿದ್ದರಾಮಯ್ಯ ಭಾಷಣದ ವೇಳೆ ಮೋದಿ ಪರ ಯುವಕರ ಜಯಘೋಷ... - kannada news
ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಕೆಲವರು ಮೋದಿ ಪರ ಜಯಕಾರ ಹಾಕಿದ ಘಟನೆ ನಡೆದಿದೆ.

ಸಿದ್ದರಾಮಯ್ಯ ಚುನಾವಣ ಭಾಷಣ ಮಾಡುವಾಗ ಮೋದಿಗೆ ಜಯಕಾರ
ಸಿದ್ದರಾಮಯ್ಯ ಚುನಾವಣ ಭಾಷಣದ ವೇಳೆ ಮೋದಿ ಪರ ಜಯಘೋಷ
ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಟಿಯಾಗಿ ಮೈತ್ರಿ ಅಭ್ಯರ್ಥಿ ಪರ ಚುನಾವಣ ಪ್ರಚಾರ ಕೈಗೊಂಡಿದ್ದರು. ಕಡಕೋಳ ಗ್ರಾಮದ ಬಳಿ ವೇದಿಕೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ವೇದಿಕೆಯಿಂದ ಸ್ವಲ್ಪ ದೂರದಲ್ಲಿ ಆಟೋ ನಿಲ್ದಾಣದ ಬಳಿ ಯುವಕರ ಗುಂಪೊಂದು ಮೋದಿಗೆ ಮತ್ತು ಪ್ರತಾಪ್ ಸಿಂಹಗೆ ಜಯಕಾರ ಹಾಕಿದರು.
ಈ ವೇಳೆ ಕೆಲಕಾಲ ವೇದಿಕೆ ಬಳಿ ಗೊಂದಲ ಉಂಟಾಯಿತು. ಆಗ ಪೊಲೀಸರು ಯುವಕರಿಗೆ ಬುದ್ಧಿ ಸ್ಥಳದಿಂದ ಕಳುಹಿಸಿದರು.