ಕರ್ನಾಟಕ

karnataka

ETV Bharat / state

ಪ್ರತಿಯೊಬ್ಬರೂ ಯೋಗ ಮಾಡುವುದನ್ನ ಬೆಳೆಸಿಕೊಳ್ಳಬೇಕು: ಸುತ್ತೂರು ಮಹಾಸ್ವಾಮಿ - undefined

ಆಧುನಿಕ ಯುಗಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಅತ್ಯಂತ ವಿಶಿಷ್ಟವಾಗಿದೆ ಎಂಬುದನ್ನು ಈ ದಿನ ನಾವೆಲ್ಲ ನೆನಪಿಸಿಕೊಳ್ಳಬೇಕು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.

ಸುತ್ತೂರು ಮಹಾಸ್ವಾಮಿ

By

Published : Jun 21, 2019, 12:39 PM IST

ಮೈಸೂರು: ಆಧುನಿಕ ಯುಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅತ್ಯಂತ ವಿಶಿಷ್ಟವಾಗಿದೆ ಎಂಬುದನ್ನು ಈ ದಿನ ನಾವೆಲ್ಲ ನೆನಪಿಸಿಕೊಳ್ಳಬೇಕು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.

ಇಂದು ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜಗತ್ತಿನಾದ್ಯಂತ ನಡೆಯುತ್ತಿದೆ. ಹಾಗೆಯೇ ಮೈಸೂರಿನಲ್ಲಿ ಸಹ ಈ ಕಾರ್ಯಕ್ರಮ ನಡೆಯುತ್ತಿದ್ದು, ಮೈಸೂರು ಮೊದಲಿನಿಂದಲೂ ಯೋಗಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಯೋಗಾಭ್ಯಾಸ ಮಾಡಿದವರು ಜಗತ್ತಿನಾದ್ಯಂತ ಹಲವಾರು ಕಡೆಗಳಲ್ಲಿ ಯೋಗವನ್ನು ಕಲಿಸುತ್ತಿದ್ದಾರೆ. ಪತಂಜಲಿ ಮಹರ್ಷಿಗಳು ಈ ಯೋಗದ ಸಂಸ್ಥಾಪಕರು. ಪ್ರಧಾನಿ ಮೋದಿ ಯೋಗದ ಮೂಲಕ ಜಗತ್ತಿನಲ್ಲಿ ಭಾರತಕ್ಕೆ ಒಂದು ಸ್ಥಾನವನ್ನು ತಂದು ಕೊಟ್ಟಿದ್ದಾರೆ ಎಂದು ಹೊಗಳಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ

ಪ್ರತಿಯೊಬ್ಬರೂ ಯೋಗವನ್ನು ಮಾಡಬೇಕು. ದೇಹ, ಮನಸ್ಸು ಪ್ರಶಾಂತವಾಗಿಟ್ಟುಕೊಳ್ಳಲು ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

For All Latest Updates

TAGGED:

ABOUT THE AUTHOR

...view details