ಮೈಸೂರು: ಕಳೆದ ಬಾರಿ ಚುನಾವಣೆಯಲ್ಲಿ 15 ಕೋಟಿ ಹಣ ಪಡೆದು, ಕೇವಲ 4 ರಿಂದ 5 ಕೋಟಿ ಖರ್ಚು ಮಾಡಿ 10 ಕೋಟಿಯನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಹಣದಲ್ಲಿ ಮಕ್ಕಳಿಗೆ ಪೆಟ್ರೋಲ್ ಬಂಕ್, ಬಾರ್ಗಳನ್ನ ಮಾಡಿಕೊಂಡಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.
ಇಂದು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು. ವಿಶ್ವನಾಥ್ ಅವರೇ ನಾನು ಬಿಜೆಪಿ ಸೇರುತ್ತೇನೆ ಎಂದು ನನ್ನ ಮನೆಗೆ ಬಂದಿದ್ದರು. ನಾನು ಅವರನ್ನ ಯಡಿಯೂರಪ್ಪ ಬಳಿಗೆ ಕಳುಹಿಸಿ ಮಾತನಾಡು ಎಂದು ಹೇಳಿದ್ದೆ. ಅದರಂತೆ ವಿಶ್ವನಾಥ್ ಮಾತನಾಡಿ ರಾಜೀನಾಮೆ ಕೊಟ್ಟು ಎಲ್ಲರನ್ನ ಬಾಂಬೆಗೆ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಯಾವುದೇ ಹಣದ ವ್ಯವಹಾರ ನಡೆದಿರಲಿಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸ್ಪಷ್ಟಪಡಿಸಿದರು.
ಹೊಸ ಬಾಂಬ್ ಸಿಡಿಸಿದ ಶ್ರೀನಿವಾಸ್ ಪ್ರಸಾದ್: ಉಪಚುನಾವಣೆಗೆ 15 ಕೋಟಿ ಪಡೆದಿದ್ದರು. ಹುಣಸೂರು ಉಪ ಚುನಾವಣೆಗೆ ನಿಲ್ಲಬೇಡ ಎಂದು ಯಡಿಯೂರಪ್ಪ ಹೇಳಿ, ಎಮ್ಎಲ್ಸಿ ಮಾಡಿ ಮಿನಿಸ್ಟರ್ ಮಾಡುತ್ತೇನೆ ಎಂದಿದ್ದರು. ಆದರೆ, ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದು ಹಠ ಹಿಡಿದು ಟಿಕೆಟ್ ಪಡೆದರು. ಆಗ ಚುನಾವಣೆಗೋಸ್ಕರ 15 ಕೋಟಿ ಹಣ ಪಡೆದಿದ್ದರು. ಅದರಲ್ಲಿ 4 ರಿಂದ 5 ಕೋಟಿ ಖರ್ಚು ಮಾಡಿದ್ದಾರೆ. ಉಳಿದ 10 ಕೋಟಿಯನ್ನ ಮಕ್ಕಳಿಗೆ ಪೆಟ್ರೋಲ್ ಬಂಕ್, ಬಾರ್ಗಳನ್ನ ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ:ಬಿಜೆಪಿ ಸೇರಲು ಹಣದ ಆಮಿಷ.. ಬಾಂಬೆ ಡೈರಿಯ ಮೊದಲ ಅಧ್ಯಾಯ ಬಿಚ್ಚಿಟ್ಟ ಹೆಚ್ ವಿಶ್ವನಾಥ್
ವಿಶ್ವನಾಥ್ ಬರಿ ಬೊಗಳುವ ನಾಯಿ ಅಲ್ಲ ಜೊತೆಗೆ ಕಚ್ಚುತ್ತಾರೆ. ಸಹಾಯ ಮಾಡಿದವರ ಮೇಲೆ ಯಾವುದೇ ಕೃತಜ್ಞತೆ ಇಲ್ಲದ ಮನುಷ್ಯ. ನನ್ನ ರಾಜಕೀಯ ಜೀವನಕ್ಕೆ ಇನ್ನೊಂದು ವರ್ಷ ಆದರೆ, 50 ವರ್ಷ ಪೂರೈಸಿದಂತೆ ಆಗುತ್ತದೆ. ನಾನು ಅಲೆಮಾರಿ ರಾಜನಲ್ಲ, ಸ್ವಾಭಿಮಾನಿ ರಾಜಕೀಯ ಮುತ್ಸದಿ ಎಂದು ನನ್ನನ್ನ ಜನ ಕರೆಯುತ್ತಾರೆ ಎಂದು ಹೇಳುವ ಮೂಲಕ ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.