ಮೈಸೂರು :ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆದಾಕ್ಷಣ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಆದರೆ, ಅವರ ಸೌಜನ್ಯ ಇದೆಯಲ್ಲ ಅದು ಮೆಚ್ಚುವಂತಹದ್ದು.
ಸಿದ್ದರಾಮಯ್ಯಗೆ ನಾವು ಬಂದು ಬಿಡ್ತೀವಿ ಅನ್ನೋ ಆತಂಕನೂ ಬೇಡ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಒಬ್ಬ ಸಂಘಟನಾ ಚತುರ. ನಿಮ್ಮನ್ನು (ಸಿದ್ದರಾಮಯ್ಯ) ಜೆಡಿಎಸ್‌ನಿಂದ ಕಿತ್ತೆಸೆದಾಗ, ಇದೇ ಡಿ.ಕೆ. ಶಿವಕುಮಾರ್, ನಾನು, ಎಸ್.ಎಂ. ಕೃಷ್ಣ ಎಲ್ಲಾ ಸೇರಿ ಕಾಂಗ್ರೆಸ್‌ಗೆ ಸೇರಿಸಿಕೊಂಡೆವು. ಅವಾಗ ಯಾರಾದ್ರು ಸಿದ್ದರಾಮಯ್ಯ ಬಂದ್ರು ಪ್ರಳಯ ಆಗುತ್ತೆ ಅಂದ್ರಾ..? ದ್ವೇಷ ಸಾಧನೆ ಮಾಡುವುದಲ್ಲ. ಡಿಕೆಶಿಯಂತ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕು ಎಂದು ಕುಟುಕಿದರು.
SSLC ಪರೀಕ್ಷೆ ನಡೆಸಲು ಇದು ಸೂಕ್ತ ಸಮಯವಲ್ಲ. ಜುಲೈ 3ನೇ ವಾರದಲ್ಲಿ ಡೆಲ್ಟಾ ಪ್ಲಸ್ ಅಲೆ ಶುರುವಾಗುವ ಸಾಧ್ಯತೆ ಇದೆ ಹೇಳುತ್ತಿದ್ದಾರೆ. ಡೆಲ್ಟಾ ಪ್ಲಸ್ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದರಿಂದ ಎಲ್ಲಾ ಕಡೆ ಒಂದು ರೀತಿಯ ಆತಂಕದ ವಾತಾವರಣವಿದೆ ಎಂದರು.