ಮೈಸೂರು:ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಜಿಲ್ಲೆಯವರಿಗೆ ಸಚಿವ ಸ್ಥಾನ ಕೊಡದೇ ತಪ್ಪು ಮಾಡಿದ್ರು, ಈಗಲೂ ಅದು ಮುಂದುವರೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆ ಮಾನಸ ಗಂಗೋತ್ರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರಿದ್ದಾರೆ. ರಾಮದಾಸ್ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಕೊನೆಯಲ್ಲಿ ಕೈ ತಪ್ಪಿದೆ. ಮೈಸೂರಿನವರಿಗೆ ಸಚಿವ ಸ್ಥಾನ ಮೀಸಲು ಇಡಬೇಕಿತ್ತು ಎಂದರು.
ಜಮೀರ್ ಅಹಮ್ಮದ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿರುವುದು ರಾಜಕೀಯ ಪ್ರೇರಿತ ಅಲ್ಲ, ಅವುಗಳ ಕರ್ತವ್ಯ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಹೀಗೆ ದಾಳಿ ಮಾಡಲಾಗುತ್ತಿತ್ತು. ಆಗ ಬೇರೆ ಪಕ್ಷಗಳು ಪ್ರಶ್ನೆ ಮಾಡಿದ್ವಾ? ಐಎಂಎಯಲ್ಲಿರುವ ಬಡವರ ಹಣದ ವಿಚಾರವಾಗಿ ಇ.ಡಿ.ದಾಳಿ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ : ಹೊಸ ಸಂಪುಟದ ನೂತನ ಸಚಿವರಿಗೆ ಖಾತೆಗಳ ಹಂಚಿಕೆ: ಯಾರ‍್ಯಾರಿಗೆ ಯಾವ ಖಾತೆ.. ಇಲ್ಲಿದೆ ಸಂಪೂರ್ಣ ವಿವರ
ದಸರಾ ಮಾಡಲೇ ಬೇಕು:ಈ ಬಾರಿ ದಸರಾವನ್ನ ಸಂಪ್ರದಾಯಿಕವಾಗಿಯಾದರೂ ಮಾಡಲೇಬೇಕು ಎಂದು ಒತ್ತಾಯಿಸಿದರು.