ಮೈಸೂರು:ಜಮೀರ್ ಅವರು ಸಿದ್ದರಾಮಯ್ಯ ನವರ ಕಣ್ಣಿಗೆ ಸತ್ಯವಂತನಂತೆ ಕಾಣುತ್ತಾರೆ, ಪೊಲೀಸರ ಕಣ್ಣಿಗೆ ಬೇರೆ ತರಹ ಕಾಣಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.
ಈ ದಂಧೆ ಎಲ್ಲಿ ನಡೆಯುತ್ತದೆ ಎಂಬುದು ಪೊಲೀಸರಿಗೆ , ಸಿಸಿಬಿ ಅವರಿಗೆ ಗೊತ್ತಿರುವ ವಿಚಾರ. ಗಾಂಜಾ ಕೇಸ್ ನಡೆಸುವ ಲಾಯರ್ ಮನೆಗಳ ಹತ್ತಿರ ಹೋಗಿ ಕುಳಿತರೆ ಎಲ್ಲವೂ ಗೊತ್ತಾಗುತ್ತದೆ. ಇನ್ನು ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಬೇಕೆಂದು ಹೇಳಿದ ವಿಶ್ವನಾಥ್, ಸಿದ್ದರಾಮಯ್ಯ ನವರ ಕಣ್ಣಿಗೆ ಜಮೀರ್ ಖಾನ್ ಸತ್ಯವಂತನಂತೆ ಕಾಣಿಸುತ್ತಿದ್ದಾರೆ, ಪೊಲೀಸರ ಕಣ್ಣಿಗೆ ಬೇರೆ ತರಹ ಕಾಣಿಸುತ್ತಾರೆ, ನಮಗೆ ಪೊಲೀಸರ ಕಣ್ಣು ಮುಖ್ಯ, ಸಿದ್ದರಾಮಯ್ಯ ಕಣ್ಣು ಅಲ್ಲ ಎಂದು ವ್ಯಂಗ್ಯವಾಡಿದ್ರು. ಮೈಸೂರಿನ ದೇವರಾಜ ಅರಸು ಮಾರುಕಟ್ಟೆಯಲ್ಲಿ ಸಣ್ಣ ಸಣ್ಣ ಗೂಡು ಅಂಗಡಿಗಳು ಇವೆ, ಅಲ್ಲಿ ಏನು ಸಿಗುತ್ತದೆ ಎಂಬುದು ಪೊಲೀಸರಿಗೆ ಗೊತ್ತಿರದ ವಿಚಾರವಲ್ಲ ಎಂದು ವಿಶ್ವನಾಥ್ ಹೇಳಿದರು.