ಕರ್ನಾಟಕ

karnataka

ETV Bharat / state

ಮೇಕೆದಾಟು ಯೋಜನೆಗೆ ಪಾದಯಾತ್ರೆ ಬೇಕಿಲ್ಲ, ಕಾನೂನು ಹೋರಾಟ ಮುಖ್ಯ: ಹೆಚ್.ವಿಶ್ವನಾಥ್ - ಮೈಸೂರಿನಲ್ಲಿ ಹೆಚ್​​ ವಿಶ್ವನಾಥ್ ಸುದ್ದಿಗೋಷ್ಠಿ

ಮೇಕೆದಾಟು ಯೋಜನೆ ಈಗ ಸುಪ್ರೀಂಕೋರ್ಟ್‌ನಲ್ಲಿ‌ದೆ. ಕಾನೂನು ಮೂಲಕವೇ ಇದನ್ನ ಗೆಲ್ಲಬೇಕು. ಸಿದ್ದರಾಮಯ್ಯ ಮೊದಲೇ ಕಾನೂನು ಪಂಡಿತರು, ಇದೆಲ್ಲ ಅವರಿಗೆ ಗೊತ್ತಿತ್ತು. ಹೀಗಿದ್ದರೂ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡಿದರು ಅಷ್ಟೇ..

ಮೈಸೂರಿನಲ್ಲಿ ಹೆಚ್​​ ವಿಶ್ವನಾಥ್ ಸುದ್ದಿಗೋಷ್ಠಿ
ಮೈಸೂರಿನಲ್ಲಿ ಹೆಚ್​​ ವಿಶ್ವನಾಥ್ ಸುದ್ದಿಗೋಷ್ಠಿ

By

Published : Jan 14, 2022, 3:46 PM IST

ಮೈಸೂರು :ಮೇಕೆದಾಟು ಯೋಜನೆಗೆ ಪಾದಯಾತ್ರೆ ಸಮರ ಬೇಕಿರಲಿಲ್ಲ. ಇದರ ಬದಲಾಗಿ ಕಾನೂನು ಸಮರ ಆಗಬೇಕು. ಇದೆಲ್ಲ ತಿಳಿದಿದ್ದರು ಸಿದ್ದರಾಮಯ್ಯ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಹೆಚ್. ವಿಶ್ವನಾಥ್ ಪಾದಯಾತ್ರೆ ಬಗ್ಗೆ ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ಆಡಳಿತ ಮಂಡಳಿಯ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯ ಹೆಚ್‌ ವಿಶ್ವನಾಥ್ ಅವರು ನೇಮಕಗೊಂಡ ಹಿನ್ನೆಲೆಯಲ್ಲಿ ಇಂದು ಆಡಳಿತ ಕಚೇರಿಗೆ ಆಗಮಿಸಿ‌ ಅಧಿಕಾರ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU) ಆಡಳಿತ ಮಂಡಳಿಯ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯ ಹೆಚ್‌ ವಿಶ್ವನಾಥ್ ನೇಮಕ

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಪಾದಯಾತ್ರೆ ಸಮರ ಬೇಕಿರಲಿಲ್ಲ.‌ ಇದಕ್ಕೆ ಕಾನೂನು ಸಮರ ಆಗಬೇಕು. ಸಿದ್ದರಾಮಯ್ಯನವರು ಬೆಂಗಳೂರಿನಿಂದ ಬಳ್ಳಾರಿವರೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇದರಿಂದ ಆದ ಪ್ರಯೋಜನ ಏನು?.

ಬಳ್ಳಾರಿ ಪಾದಯಾತ್ರೆಯಿಂದ ರೆಡ್ಡಿಗಳಿಗೆ ಶಿಕ್ಷೆ ಆಗಲಿಲ್ಲ. ಅದಕ್ಕೆ ಬದಲಾಗಿ ಆಗಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಕಾನೂನು ಮೂಲಕ ರೆಡ್ಡಿಗಳಿಗೆ ಶಿಕ್ಷೆ ಕೊಡಿಸಿದರು. ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ನಂತರ, 720 ಅಧಿಕಾರಗಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲಿಲ್ಲ ಎಂದು ಕಾಂಗ್ರೆಸ್ ಪಾದಯಾತ್ರೆಯನ್ನ ಟೀಕಿಸಿದರು.

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಯನ್ನ ಟೀಕಿಸಿರುವ ಬಿಜೆಪಿ ಎಂಎಲ್‌ಸಿ ಹೆಚ್​​ ವಿಶ್ವನಾಥ್..

ಮೇಕೆದಾಟು ಯೋಜನೆ ಈಗ ಸುಪ್ರೀಂಕೋರ್ಟ್‌ನಲ್ಲಿ‌ದೆ. ಕಾನೂನು ಮೂಲಕವೇ ಇದನ್ನ ಗೆಲ್ಲಬೇಕು. ಸಿದ್ದರಾಮಯ್ಯ ಮೊದಲೇ ಕಾನೂನು ಪಂಡಿತರು, ಇದೆಲ್ಲ ಅವರಿಗೆ ಗೊತ್ತಿತ್ತು. ಹೀಗಿದ್ದರೂ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡಿದರು ಅಷ್ಟೇ.. ಎಂದರು.

ಎಲ್ಲಾ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅವಶ್ಯಕತೆ ಇಲ್ಲ :ಕೊರೊನಾ ಹೆಚ್ಚಾಗಿರುವ ಕಡೆ ಮಾತ್ರ ಲಾಕ್‌ಡೌನ್ ಮಾಡಿ. ಅದನ್ನು ಬಿಟ್ಟು ಎಲ್ಲಾ ಕಡೆ ಲಾಕ್‌ಡೌನ್ ಮಾಡುವುದು ಸರಿಯಲ್ಲ. ಈಗಾಗಲೇ ಲಾಕ್‌ಡೌನ್‌ನಿಂದ ಜನರು ಜರ್ಜರಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ಕಡೆ ಲಾಕ್‌​ಡೌನ್ ಅವಶ್ಯಕತೆ ಇಲ್ಲ ಎಂದರು.

1 ರಿಂದ 7ನೇ ತರಗತಿಯವರೆಗೆ ಸಂಪೂರ್ಣ ರಜೆ ನೀಡಿ. ಎಸ್ಎಲ್ಸಿಸಿ ಮತ್ತು ದ್ವೀತಿಯ ಪಿಯುಸಿವರೆಗೆ ಭೌತಿಕ ತರಗತಿ ಮಾಡಿ.‌ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಆದೇಶ ಮಾಡಿ‌.‌ ಜೊತೆಗೆ ತಜ್ಞರ ಜೊತೆ ಸಭೆ ನಡೆಸಿ ಸರಿಯಾದ ಆದೇಶ ಮಾಡಿ ಎಂದ ವಿಶ್ವನಾಥ್, ವೀಕೆಂಡ್ ಕರ್ಫ್ಯೂವಿನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರು ವೀಕೇಂಡ್ ಕರ್ಫ್ಯೂ ಹೆಸರಿನಲ್ಲಿ ಟ್ರಿಪ್ ಮಾಡುತ್ತಿದ್ದಾರೆ ಅಷ್ಟೇ.. ಮತ್ತೊಮ್ಮೆ ವಿಕೇಂಡ್ ಕರ್ಫ್ಯೂನ ಬಗ್ಗೆ ಯೋಚಿಸಿ ಎಂದರು.

ಇನ್ನೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕರ್ನಾಟಕದ ಪ್ರತಿಷ್ಠಿತ ವಿಶ್ವ ವಿದ್ಯಾನಿಲಯವಾಗಿದೆ. ಕುಲಪತಿಯಾಗಿದ್ದ ರಂಗಪ್ಪನವರ ಕಾಲದಲ್ಲಿ ಮುಕ್ತ ವಿವಿಗೆ ದೊಡ್ಡ ಮಟ್ಟದ ಕಟ್ಟಡಗಳನ್ನ ನಿರ್ಮಾಣ ಮಾಡಿಲಾಯಿತು. ಗ್ರಾಮಾಂತರ ಮಕ್ಕಳಿಗೆ ಕೆಎಸ್ಒಯುನಿಂದ ಹೆಚ್ಚು ಸಹಕಾರಿಯಾಗಲಿದೆ.

ಸಾವಿರಾರು ವಿದ್ಯಾರ್ಥಿಗಳ ಕನಸನ್ನ ನನಸು ಮಾಡುವ ಜವಾಬ್ದಾರಿ ವಿವಿ ಮೇಲೆ ಇದೆ‌. ಹಾಗಾಗಿ, ಇದರ ಅಭಿವೃದ್ಧಿಗೆ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಹೆಚ್. ವಿಶ್ವನಾಥ್​​ ಅಧಿಕಾರ ಸ್ವೀಕರಿಸಿದರು.

For All Latest Updates

TAGGED:

ABOUT THE AUTHOR

...view details