ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ: ಜೆಡಿಎಸ್ ಟಿಕೆಟ್​ ಹಂಚಿಕೆಯಲ್ಲಿ ರೋಚಕ ತಿರುವು - ಹೆಚ್​ಡಿ ಕುಮಾರಸ್ವಾಮಿ

ಜೆಡಿಎಸ್​​ ಪಕ್ಷಕ್ಕೆ ಗುಡ್ ಬೈ ಹೇಳ್ತೀನಿ ಎಂದಿದ್ದ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್(MLC Sandesh Nagraj) ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(former CM H D Kumaraswamy) ಅವರನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ.

MLA Sandesh nagraj meets hd Kumaraswamy
ಕುಮಾರಸ್ವಾಮಿ ಯವರನ್ನು ಭೇಟಿಯಾದ ಸಂದೇಶ್​ ನಾಗರಾಜ್​

By

Published : Nov 22, 2021, 6:39 PM IST

ಮೈಸೂರು:ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (former CM H D Kumaraswamy) ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಕುಮಾರಸ್ವಾಮಿಯವರನ್ನು ಭೇಟಿಯಾದ ಸಂದೇಶ್​ ನಾಗರಾಜ್​

ಈಗಾಗಲೇ ಜೆಡಿಎಸ್​​ ಪಕ್ಷಕ್ಕೆ ಗುಡ್ ಬೈ ಹೇಳ್ತೀನಿ ಎಂದಿದ್ದ ಸಂದೇಶ್ ನಾಗರಾಜ್ (Sandesh Nagraj meets HDK)ಅವರು, ಪುತ್ರ ಸಂದೇಶ್ ಜೊತೆ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಹೆಚ್​ಡಿಕೆ ಜೊತೆ ಶಾಸಕ ಸಾ.ರಾ. ಮಹೇಶ್ ಕೂಡ ಇದ್ದರು.

ಅತ್ತ ಪರಿಷತ್ ಟಿಕೆಟ್ ಬಯಸಿ ಪಕ್ಷ ಸೇರ್ಪಡೆಗೆ ಮಂಜೇಗೌಡ ಕಾದು ಕುಳಿತಿದ್ದಾರೆ. ಇಂದು ಬೆಳಗ್ಗೆ ನಡೆಯಬೇಕಿದ್ದ ಮಂಜೇಗೌಡ ಪಕ್ಷ ಸೇರ್ಪಡೆ ಇನ್ನೂ ಶುರುವಾಗಿಲ್ಲ. ಮಂಜೇಗೌಡ ಸೇರ್ಪಡೆಗೂ ಮುನ್ನ ಕುಮಾರಸ್ವಾಮಿ ಅವರನ್ನು ಸಂದೇಶ್ ನಾಗರಾಜ್ ಭೇಟಿಯಾಗಿದ್ದಾರೆ. ಈಗ ಹೆಚ್​ ಡಿ ಕುಮಾರಸ್ವಾಮಿ ಅವರ ನಡೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಅಧಿಕೃತ ಪಟ್ಟಿ ಬಿಡುಗಡೆಗೆ ವಿಳಂಬ : ಬಿ ಫಾರಂ ಪಡೆಯುತ್ತಿರುವ ಪರಿಷತ್ ಕೈ ಅಭ್ಯರ್ಥಿಗಳು

ABOUT THE AUTHOR

...view details