ಮೈಸೂರು:ಸಾವರ್ಕರ್ ಒಬ್ಬ ರಣಹೇಡಿ ಮತ್ತು ದೇಶದ್ರೋಹಿ. ಇಂತಹ ವ್ಯಕ್ತಿಯನ್ನು ಬಿಜೆಪಿಯವರು ತಮ್ಮ ನಾಯಕ ಎಂದು ಬಿಂಬಿಸುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಕೊಂದ ಗೋಡ್ಸೆ ಬಿಜೆಪಿಯವರ ನಾಯಕ ಎಂದು ವರುಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ನಂಜನಗೂಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಪೂರ್ವಜರು ಯಾರು?. ಇವರ ನಾಯಕರು ಯಾರು ಎಂಬುದನ್ನು ತಿಳಿಯಲು, ಮೂಲ ಹುಡುಕಿದರೆ ಗೊತ್ತಾಗುತ್ತದೆ. ಜೊತೆಗೆ ಮಹಾತ್ಮ ಗಾಂಧೀಜಿ ಕೊಲ್ಲಲು ಗೋಡ್ಸೆಗೆ ಪ್ರೇರಣೆ ನೀಡಿದ ಸಾವರ್ಕರ್ ಇವರ ನಾಯಕ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.