ಕರ್ನಾಟಕ

karnataka

ETV Bharat / state

ಬಾಯಿ ಮುಚ್ಕೊಳ್ರೀ.. ಏನ್ರೀ ನಿಮ್ ಹೆಸರು: ‌ಅಧಿಕಾರಿಗೆ ಚಳಿ ಬಿಡಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ - ತಡಗೂರು ಗ್ರಾಮಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ

ಶುಕ್ರವಾರ ನಂಜನಗೂಡು ತಾಲೂಕಿನ ತಡಗೂರು ಗ್ರಾಮಕ್ಕೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ, ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ, ಚೆಸ್ಕಾಂ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

ಅಧಿಕಾರಿಗೆ ಚಳಿ ಬಿಡಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ
ಅಧಿಕಾರಿಗೆ ಚಳಿ ಬಿಡಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

By

Published : Jan 8, 2022, 10:23 AM IST

ಮೈಸೂರು: ವರುಣಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ತಡಗೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗ್ರಾಮಸ್ಥರ ಕುಂದು ಕೊರತೆಗಳನ್ನು ಆಲಿಸಿ, ಚೆಸ್ಕಾಂ (ಚಾಮುಂಡೇಶ್ವರಿ ವಿದ್ಯುತ್​ಸರಬರಾಜು ನಿಗಮ ನಿಯಮಿತ ಮೈಸೂರು ) ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

ಗ್ರಾಮ ಪಂಚಾಯತ್​ವೊಂದರ ವಿದ್ಯುತ್ ಬಿಲ್ ಬಾಕಿ ಕೋಟಿ ರೂ.ಗೂ ಹೆಚ್ಚಾಗಿದ್ದ ಕಾರಣ ಕಚೇರಿಯ ಸಂಪರ್ಕ ಕಟ್ ಮಾಡಲಾಗಿತ್ತು. ಅಧಿಕಾರಿಯ ಕ್ರಮ ಖಂಡಿಸಿ ಗ್ರಾಮ ಪಂಚಾಯತ್​ ಸದಸ್ಯರು ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

ಅಧಿಕಾರಿಗೆ ಚಳಿ ಬಿಡಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ನಂತರ ನಂಜನಗೂಡು ಗ್ರಾಮಾಂತರ ಚೆಸ್ಕಾಂ ಅಧಿಕಾರಿ ದೀಪಕ್​ ಕರೆಯಿಸಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಬಾಯಿ ಮುಚ್ಕೊಳ್ರೀ, ಏನ್ರೀ ನಿಮ್ಮ ಹೆಸರು. ಕೋಟಿ ರೂ. ಬಾಕಿ ಇದ್ದರೆ ಕಂತಿನಲ್ಲಿ ವಸೂಲಿ ಮಾಡಿ. ಅಧಿಕ ಪ್ರಸಂಗ ಮಾಡಬೇಡಿ, ತಾಕತ್ ಇದ್ದರೆ ಫ್ಯಾಕ್ಟರಿಗಳಿಗೆ ಹೋಗಿ ಹಣ ವಸೂಲಿ ಮಾಡ್ರಿ. ಶ್ರೀಮಂತರ ಮನೆ ವಿದ್ಯುತ್ ಸಂಪರ್ಕ ಕಟ್ ಮಾಡ್ರಿ ನೋಡ್ತೇನಿ. ಅದನ್ನ ಬಿಟ್ಟು ಬಡವರಿಗೆ ತೊಂದರೆ ಕೊಡಬೇಡಿ ಎಂದು ಕೆಂಡಾಮಂಡಲರಾದರು.

ಓದಿ:Covid Research: ಪರಸ್ಪರ ನಂಬಿಕೆಯುಳ್ಳ ಸಮುದಾಯಗಳಲ್ಲಿ ಕೊರೊನಾ ಸೋಂಕು, ಸಾವು ಕಡಿಮೆ

ABOUT THE AUTHOR

...view details