ಮೈಸೂರು: ಪ್ರಿಯಾಂಕ್ ಖರ್ಗೆ ಹೆಸರು ಗಂಡೊ,ಹೆಣ್ಣೋ ಗೊತ್ತೇ ಆಗಲ್ಲ ಎಂದು ವ್ಯಂಗ್ಯವಾಡಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪ್ರತಾಪ್ ಸಿಂಹ ಮಾತುಗಳು ಅವರ ಸಂಸ್ಕೃತಿ ತೋರಿಸುತ್ತದೆ: ಯತೀಂದ್ರ ಸಿದ್ದರಾಮಯ್ಯ - ಪ್ರತಾಪ್ ಸಿಂಹ
ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯವರು ಯಾವಾಗಲೂ ವೈಯುಕ್ತಿಕ ಟೀಕೆ ಮಾಡುತ್ತಾರೆ. ಇದು ಅವರ ಹಳೆಯ ಚಾಳಿ. ಇತ್ತೀಚೆಗೆ ಅವರ ನಾಯಕರು ಮಾಡುವುದನ್ನು ಕಾರ್ಯಕರ್ತರು ಫಾಲೋ ಮಾಡುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹರಿಗೆ ಧೈರ್ಯ ಇದ್ದರೆ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಇವರು ಸತ್ಯ ಸಂತರು ಪ್ರಾಮಾಣಿಕರಾಗಿದ್ದರೆ ಉತ್ತರ ಕೊಡಲಿ. ಸರ್ಕಾರಕ್ಕೆ ಧೈರ್ಯ ಇದ್ದರೆ ಬಿಟ್ ಕಾಯಿನ್ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರು ಯಾವಾಗಲು ವೈಯುಕ್ತಿಕ ಟೀಕೆ ಮಾಡುತ್ತಾರೆ. ಇದು ಅವರು ಹಳೆಯ ಚಾಳಿ. ಇತ್ತೀಚೆಗೆ ಅವರ ನಾಯಕರು ಮಾಡುವುದನ್ನು ಕಾರ್ಯಕರ್ತರು ಫಾಲೋ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟರು.