ಮೈಸೂರು: ಕೆ.ಆರ್. ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಶಾಸಕ ತನ್ವೀರ್ ಸೇಠ್ ವಿಷಾದ ವ್ಯಕ್ತಪಡಿಸಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಪ್ರಕರಣ: ಶಾಸಕ ತನ್ವೀರ್ ಸೇಠ್ ವಿಷಾದ - ಕೊರೊನಾ ಸೋಂಕಿತ ಸಂಬಂಧಿ
ಕೊರೊನಾ ಸೋಂಕಿತ ವ್ಯಕ್ತಿ ಬ್ಲೇಡ್ನಿಂದ ಕೈ ಕುಯ್ದು ಕೊಂಡಿದ್ದಾನೆ. ಆತನಿಗೆ ವೈದ್ಯರು ಚಿಕಿತ್ಸೆ ನೀಡಿ, ಹೋಂ ಐಸೋಲೇಷನ್ ಆಗುವಂತೆ ಸಲಹೆ ಕೊಟ್ಟಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿಯೇ ಬೆಡ್ ಬೇಕು ಅಂತ ಹೇಳಿ ಹಲ್ಲೆ ನಡೆಸಿದ್ದಾನೆ.
ಜಿಪಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತ ವ್ಯಕ್ತಿ ಬ್ಲೇಡ್ನಿಂದ ಕೈ ಕುಯ್ದು ಕೊಂಡಿದ್ದಾನೆ. ಆತನಿಗೆ ವೈದ್ಯರು ಚಿಕಿತ್ಸೆ ನೀಡಿ, ಹೋಂ ಐಸೋಲೇಷನ್ ಆಗುವಂತೆ ಸಲಹೆ ಕೊಟ್ಟಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿಯೇ ಬೆಡ್ ಬೇಕು ಎಂದು ಹಲ್ಲೆ ನಡೆಸಿದ್ದಾನೆ.
ಕೊರೊನಾ ಸಮಯದಲ್ಲಿ ವೈದ್ಯರು ತಮ್ಮ ಜೀವವನ್ನ ಮುಡಿಪಾಗಿಟ್ಟು ಕೆಲಸ ಮಾಡುತ್ತಿದ್ದು, ಅವರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದರು. ಎನ್.ಆರ್. ಕ್ಷೇತ್ರದಲ್ಲಿ ವೈದ್ಯರ ಕೊರತೆ ಇದೆ. ಲಕ್ಷ ರೂ.ಸಂಬಳ ಕೊಡುತ್ತೀನಿ ಅಂದರು ಬರುತ್ತಿಲ್ಲ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೀವಿ ಎಂದರು.