ಮೈಸೂರು :ಕೆಆರ್‌ಎಸ್ ಡ್ಯಾಂ ಬಿರುಕು ವಿವಾದದ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ ವಿಚಾರವಾಗಿ ಎನ್ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಟಾಂಗ್ ನೀಡಿದರು. ಸುತ್ತೂರು ಶಾಖಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಯಾರಿಗೆ ಪ್ರತ್ಯೇಕವಾಗಿ ಬೆಂಬಲ ಕೊಡ್ತಾರೆ ಎಂಬುದು ಮುಖ್ಯ ಅಲ್ಲ.
ಗಣಿಗಾರಿಕೆಗೆ ಎಲ್ಲಿ ಅವಕಾಶ ಕೊಡಬೇಕು, ಕೊಡಬಾರದು ಎಂಬ ನಿರ್ಧಾರ ಗಣಿ ಇಲಾಖೆ ಕೈಗೊಳ್ಳಬೇಕಿರುವುದು ಮುಖ್ಯ. ಅಕ್ರಮ ಗಣಿಗಾರಿಕೆ ನಡೆಯುತ್ತಿರುದನ್ನ ಪತ್ತೆ ಹಚ್ಚುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು. ಸುಮಲತಾ ಅವರ ಬೆಂಬಲವಾಗಿ ನಿಂತವರು ವಿರೋಧ ಪಕ್ಷದವರು.
ನಮ್ಮ ಮೈಸೂರು ಸಂಸದರು ಯಾರೇ, ಆದರೂ ಅವರಿಗೆ ನನ್ನ ಮನವಿ ಇಷ್ಟೇ.. ನಿಮ್ಮ ಕಿತ್ತಾಟ, ಒಳ ಜಗಳದಿಂದ ರಾಜ್ಯವನ್ನ ಹಾಳು ಮಾಡಬೇಡಿ. ಇಲ್ಲಿ ವ್ಯವಸ್ಥೆ ಸರಿಯಾಗಬೇಕಾದರೆ ಕಾನೂನು ಪಾಲನೆ ಆಗಬೇಕು ಎಂದು ತನ್ವೀರ್ ಸೇಠ್ ಸಲಹೆ ನೀಡಿದರು.
ಕೆಆರ್‌ಎಸ್ ಡ್ಯಾಂ ಗಲಾಟೆ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ.. ಏನೇನೋ ಹೇಳಿಕೆ ಕೊಟ್ಟು ಯಡವಟ್ಟು ಮಾಡಿಕೊಂಡವರು ಒಂದು ಕ್ಷಣ ಯೋಚನೆ ಮಾಡಿ. ಸಂಪತ್ತು, ರಾಜ್ಯಕ್ಕೆ ತೊಂದರೆ ಕೊಡುವ ಕೆಲಸ ಯಾರು ಮಾಡಬಾರದು. ವಿರೋಧ ಪಕ್ಷ ಸೇರಿ ಎಲ್ಲರು ಅವರವರ ಕೆಲಸ ಮಾಡ್ತಿದ್ದಾರೆ. ಕಿವಿ ಇರುವವರು ಮಾತಾಡಲು ಸಾಧ್ಯ. ಆದರೆ, ಕಳ್ಳ ಕಿವಿ ಇಟ್ಟುಕೊಂಡವರು ಮಾತಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ರಾಜ್ಯದ ಅಭಿವೃದ್ಧಿ ವಿಚಾರ ಬಂದಾಗ ಎಲ್ಲರು ಜತೆಗೂಡಿ ಕೆಲಸ ಮಾಡಬೇಕು. ಗಣಿ ವಿಚಾರದ ಕರ್ತವ್ಯದಲ್ಲಿ ಯಾರೇ ಲೋಪವೆಸಗಿದರು ಅದಕ್ಕೆ ಕ್ಷಮೆ ಇಲ್ಲ ಎಂದರು. ಇನ್ನು, ತಮ್ಮ ಮೇಲೆ ನಡೆದಿರುವ ಹಲ್ಲೆ ವಿಚಾರವಾಗಿ ಮಾತನಾಡಿ, ಪ್ರಕರಣ ಸಂಬಂಧ ಸ್ವಂತಕ್ಕೆ ವಕೀಲರನ್ನ ನೇಮಿಸಿಕೊಂಡಿದ್ದೇನೆ.
ವಕೀಲರ ಮೂಲಕ ನನ್ನ ಕೇಸ್‌ನ ನಡೆಸುತ್ತೀನೆ. ಕಳೆದ ವಾರದ ಪೊಲೀಸ್ ಆಯುಕ್ತರು, ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಈಗ ಮೈಸೂರಿಗೆ ಭೇಟಿ ನೀಡಿರುವ ಗೃಹ ಸಚಿವ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ ಎಂದರು.
ತನಿಖೆಗೆ ಸ್ಪಂದಿಸುವುದಾಗಿ ಗೃಹಮಂತ್ರಿ ಹೇಳಿದ್ದಾರೆ. ಈಗಾಗಲೇ ಹಲ್ಲೆ ಪ್ರಕರಣ ಸಂಬಂಧಿಸಿದಂತೆ 8 ಜನರಿಗೆ ಬೇಲ್ ಸಿಕ್ಕಿದೆ. ಇನ್ನೂ ಕೂಡ ಆರೋಪಿಗಳ ಮೇಲೆ ಕ್ರಮವಾಗಿಲ್ಲ. ನಾನು ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದೇನೆ ಎಂದರು. ಮೈಸೂರು ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ ವಕ್ಫ್ ಬೋರ್ಡ್ ವಿಚಾರವಾಗಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಇದೇ ವೇಳೆ ತಿಳಿಸಿದರು.