ಕರ್ನಾಟಕ

karnataka

ETV Bharat / state

ದೈಹಿಕ-ಮಾನಸಿಕ ಸ್ಟ್ರೋಕ್ ಆಗಿರೋದು ವಿಶ್ವನಾಥ್​​ಗೆ, ಯಡಿಯೂರಪ್ಪಗೆ ಅಲ್ಲ: ಸಾ.ರಾ. ಮಹೇಶ್ ಟಾಂಗ್

ನೀವೂ ಕೂಡ ಪೇಮೆಂಟ್ ಪಡೆದೇ ಮುಂಬೈಗೆ ಹೋಗಿದ್ದು ಅಂತಾ ಆಗಲೇ ಹೇಳಿದ್ದೆ. ಹೆಚ್​ ವಿಶ್ವನಾಥ್ ಬೇರೊಬ್ಬರ ಮೇಲೆ ಆರೋಪ ಮಾಡುತ್ತಾ ತಾವೇ ಬಟಾ ಬಯಲಾಗ್ತಿದ್ದಾರೆ ಎಂದು ಸಾ.ರಾ. ಮಹೇಶ್ ತಿರುಗೇಟು ನೀಡಿದ್ದಾರೆ.

mla sara mahesh talk about viswanath issue
ಸಾ.ರಾ. ಮಹೇಶ್ ಟಾಂಗ್

By

Published : Jan 14, 2021, 5:14 PM IST

Updated : Jan 14, 2021, 5:30 PM IST

ಮೈಸೂರು: ದೈಹಿಕ ಮತ್ತು ಮಾನಸಿಕ ಸ್ಟ್ರೋಕ್ ಆಗಿರುವುದು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್​​ಗೆ ಶಾಸಕ ಸಾ.ರಾ. ಮಹೇಶ್ ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ್ದಾರೆ.

ಹೆಚ್​ ವಿಶ್ವನಾಥ್​ಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಟಾಂಗ್

ಓದಿ: ನಮ್ಮನ್ನು ಒಗ್ಗೂಡಿಸಲು ಯೋಗೇಶ್ವರ್ ಎಂಟಿಬಿ ಹತ್ರ ಸಾಲ ಮಾಡಿದ್ದರು: ಸಚಿವ ರಮೇಶ್ ಜಾರಕಿಹೊಳಿ‌

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟ್ರೋಕ್ ಆಗಿ ಮಲಗಿದ್ದಾಗ ನಿಮಗೆ ಚೈತನ್ಯ ತುಂಬಿದ್ದು ಜನತಾದಳ. ಆದರೆ ಪಕ್ಷಕ್ಕೆ ದ್ರೋಹ ಮಾಡಿದರ ಪರಿಣಾಮವನ್ನ ಈಗ ಎದುರಿಸಿದ್ದೀರಿ. ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಶಾಪಕ್ಕೆ ತುತ್ತಾಗಿದ್ದೀರಿ. ಈಗ ಮತ್ತೆ ಯಡಿಯೂರು ಸಿದ್ದಲಿಂಗೇಶ್ವರನನ್ನು ಎಳೆಯಬೇಡಿ. ಈಗಿರುವ ಎಂಎಲ್​​ಸಿ ಸ್ಥಾನವೂ ಹೋಗಿಬಿಡುತ್ತೆ ಎಂದು ವಿಶ್ವನಾಥ್​​ರ ಸಿಡಿ ಆರೋಪಕ್ಕೆ ಟಾಂಗ್ ನೀಡಿದರು.

ಸಿಎಂ ಸ್ಥಾನಕ್ಕೆ ಗೌರವವಿದೆ, ಅಂತಹ ಹುದ್ದೆಯಲ್ಲಿರುವರನ್ನು ಬ್ಲ್ಯಾಕ್‌ಮೇಲ್ ಮಾಡುವುದು ಶೋಭೆಯಲ್ಲ. ಬಿಜೆಪಿ ಪಕ್ಷಕ್ಕೆ ಸೇರಿದಾಗ ನೀವು ಎಷ್ಟು ಕೋಟಿಗೆ ಸೇಲಾಗಿದ್ದಿರಿ ಅನ್ನೋದನ್ನ ಸ್ಪೀಕರ್ ಮುಂದೆಯೇ ಹೇಳಿದ್ದೇನೆ ಎಂದರು.

ನೀವೂ ಕೂಡ ಪೇಮೆಂಟ್ ಪಡೆದೇ ಮುಂಬೈಗೆ ಹೋಗಿದ್ದು ಅಂತಾ ಆಗಲೇ ಹೇಳಿದ್ದೆ. ವಿಶ್ವನಾಥ್ ಬೇರೊಬ್ಬರ ಮೇಲೆ ಆರೋಪ ಮಾಡುತ್ತಾ ತಾವೇ ಬಟಾ ಬಯಲಾಗ್ತಿದ್ದಾರೆ ಎಂದು ಸಾ.ರಾ. ಮಹೇಶ್ ತಿರುಗೇಟು ನೀಡಿದರು.

ಬಿಜೆಪಿ ಸರ್ಕಾರ ಅವಧಿಗೆ ಮುನ್ನ ಬೀಳಲ್ಲ:

ಜೆಡಿಎಸ್ ಗಿಂತ ಜಾಸ್ತಿ ದಿ‌ನ‌ ನಾನು ಬಿಜೆಪಿಯನ್ನ ನೋಡಿದ್ದೇನೆ. ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರನ್ನು ಪ್ರೀತಿಯಿಂದ ಗೆಲ್ಲಬಹುದೇ ಹೊರತು, ಹೆದರಿಸಿ ಬೆದರಿಸಿ ಗೆಲ್ಲಲು ಆಗಲ್ಲ ಎಂದು ಶಾಸಕ ಸಾ ರಾ ಮಹೇಶ್​ ಹೇಳಿದ್ರು.

ಬಿಜೆಪಿ ಸರ್ಕಾರ ಐದು ವರ್ಷಕ್ಕೆ ಮುಂಚಿತವಾಗಿ ಒಂದು ದಿನವೂ ಅಧಿಕಾರ ಬಿಡಲ್ಲ. ಯಡಿಯೂರಪ್ಪ ಯಾವತ್ತೂ ಮಾತನ್ನು ತಪ್ಪಿಲ್ಲ. 17 ಮಂದಿ ಪೈಕಿ 15 ಮಂದಿಯನ್ನು ಮಂತ್ರಿ ಮಾಡಿದ್ದಾರೆ. ಆದರೆ ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲದ್ದಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ವಿಶ್ವನಾಥ್ ವಿರುದ್ಧ ವಾಗ್ದಾಳಿ ‌ನಡೆಸಿದರು.

ವಿಶ್ವನಾಥ್ ಒಬ್ಬ ದುರಾಸೆ ಮನುಷ್ಯ:

ಬರೀ ಶಾಸಕ‌ನಾದರೆ ಸಾಕು ಅಂತಾ ಅಂಗಲಾಚಿ ಜೆಡಿಎಸ್ ಸೇರಿದ್ದರು. ಶಾಸಕನಾದ ಮೇಲೆ ಮಂತ್ರಿ ಆಗಬೇಕು ಅನ್ನೋ‌ ದುರಾಸೆಯಿಂದ, ಜೆಡಿಎಸ್ ತೊರೆದು ಬಿಜೆಪಿ ಜೊತೆ ಹೋದಿರಿ. ಈಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಯಡಿಯೂರಪ್ಪ ಅವರನ್ನು ಬೈಯುತ್ತಿದ್ದೀರಿ. ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲವೆಂದು ಹಳ್ಳಿಹಕ್ಕಿ ವಿರುದ್ಧ ಜೆಡಿಎಸ್​ ಶಾಸಕ ಮಹೇಶ್​ ಕಿಡಿಕಾರಿದರು.

Last Updated : Jan 14, 2021, 5:30 PM IST

ABOUT THE AUTHOR

...view details