ಕರ್ನಾಟಕ

karnataka

ETV Bharat / state

ಜಮೀರ್​​​ಗೆ ರಾಜಕೀಯ ಜನ್ಮ ಕೊಟ್ಟವರು ಯಾರು ಎಂಬುದನ್ನು ನೆನಪಿಸಿಕೊಳ್ಳಲ್ಲಿ : ಸಾರಾ ಮಹೇಶ್ ತಿರುಗೇಟು - ಜಮ್ಮೀರ್ ಅಹಮ್ಮದ್​ಗೆ ಸಾರಾ ಮಹೇಶ್ ತಿರುಗೇಟು

ಜಮ್ಮೀರ್ ಅಹಮ್ಮದ್​ ಹೆಚ್​ ಡಿ ಕುಮಾರಸ್ವಾಮಿ ಅವರನ್ನು ಟೀಕೆ ಮಾಡುವ ಮೊದಲು ತಮಗೆ ರಾಜಕೀಯ ಜನ್ಮಕೊಟ್ಟವರು ಯಾರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

mla sara mahesh pressmeet
ಸಾರಾ ಮಹೇಶ್ ಸುದ್ದಿಗೋಷ್ಟಿ

By

Published : Apr 9, 2021, 3:08 PM IST

ಮೈಸೂರು: ಜಮೀರ್​ ಅಹಮ್ಮದ್​ಗೆ ರಾಜಕೀಯ ಜನ್ಮ ಕೊಟ್ಟವರು ಯಾರು ಎಂಬುದನ್ನು , ಹೆಚ್​ ಡಿ ಕುಮಾರಸ್ವಾಮಿಯವರನ್ನು ಟೀಕೆ ಮಾಡುವ ಮೊದಲು ನೆನಪಿಸಿಕೊಳ್ಳಲಿ ಎಂದು ಜೆಡಿಎಸ್‌ ಶಾಸಕ ಸಾರಾ ಮಹೇಶ್ ತಿರುಗೇಟು ನೀಡಿದ್ದಾರೆ.

ಸಾರಾ ಮಹೇಶ್ ಸುದ್ದಿಗೋಷ್ಟಿ

ಇಂದು ಮೈಸೂರಿನ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಾಸಕ ಸಾರಾ ಮಹೇಶ್, ಈಗ ಏನೋ ಅರಮನೆಯಲ್ಲಿ ಇದ್ದೇನೆ ಎಂದು ಹಳೆಯದನ್ನು ಮರೆಯಬಾರದು ಎಂದರು. ಜೆಡಿಎಸ್ ಪಕ್ಷದಿಂದ ಬೆಳೆದು ಇಲ್ಲಿ ಅಧಿಕಾರ ಪಡೆದು ಇಲ್ಲಿನ ನಾಯಕರನ್ನು ಇಂದ್ರ ಚಂದ್ರ ಎಂದು ಹೊಗಳಿ ಮತ್ತೆ ಪಕ್ಷ ಬಿಟ್ಟಾಗ ಇವರನ್ನೇ ಟೀಕೆ ಮಾಡುವುದು ಸಾಮಾನ್ಯ. ಇಂತಹ ಟೀಕೆಗಳನ್ನು ಅರಗಿಸಿಕೊಳ್ಳುವ ಶಕ್ತಿ ದೇವೇಗೌಡರಿಗೆ, ಕುಮಾರಸ್ವಾಮಿಗೆ ಇದೆ ಎಂದು ಸಾರಾ ಮಹೇಶ್ ಹೇಳಿದ್ರು.

ಕೆ.ಆರ್. ನಗರದಲ್ಲಿ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ, ಸರ್ಕಾರ ಉಪ ಚುನಾವಣೆಗೆ ತೋರಿಸುತ್ತಿರುವ ಉತ್ಸಾಹವನ್ನು ರೈತರ ಸಮಸ್ಯೆ ಬಗೆಹರಿಸಲು ತೋರುತ್ತಿಲ್ಲ ಕೂಡಲೇ ಮೈಸೂರು ಜಿಲ್ಲೆಯಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ಚೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರಾ ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಒತ್ತಡದಲ್ಲಿ ಇದ್ದಾರೆ. ಎರಡು ಬಾರಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಮಾನ ಕಾಪಾಡಿಕೊಳ್ಳಲು ಕೋರ್ಟ್​​​ಗೆ ಹೋಗಿದ್ದಾರೆ. ಇವರಿಂದ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲು ಹೇಗೆ ಸಾಧ್ಯ. ಇವರು ರಾಜ್ಯದ 6.5 ಕೋಟಿ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂದು ಸಾರಾ ಪ್ರಶ್ನೆ ಮಾಡಿದರು. ಜೊತೆಗೆ ಸಾರಿಗೆ ನೌಕರರನ್ನು ಸರ್ಕಾರ ಕರೆದು ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಬೇಕು ಭಯದ ವಾತಾವರಣ ನಿರ್ಮಾಣ ಮಾಡುವುದು ಬೇಡ. ಈಗಾಗಲೇ ಸಾರ್ವಜನಿಕರಿಗೆ ತೊಂದರೆ ಆಗಿದೆ ಈಗಲಾದರೂ ಸಾರಿಗೆ ನೌಕರರನ್ನು ಮಾತುಕತೆಗೆ ಕರೆಸಿ ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು.

ABOUT THE AUTHOR

...view details