ಮೈಸೂರು :ಒಂದಲ್ಲ ಒಂದು ಕಾರಣಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಷ್ಟು ದಿನ ಕಿಡಿಕಾರಿದ್ದ ಶಾಸಕ ಸಾ.ರಾ.ಮಹೇಶ್, ಇದೀಗ ಮತ್ತೊಬ್ಬ ಅಧಿಕಾರಿ ಮನೀಶ್ ಮೌದ್ಗಿಲ್ ವಿರುದ್ಧವೂ ಸಿಡಿದೆದ್ದಿದ್ದಾರೆ.
ರೋಹಿಣಿ ಮತ್ತು ಸಾ ರಾ ಮಹೇಶ್ ನಡುವಿನ ಜಟಾಪಟಿ ಮುಂದುವರೆದಿದೆ. ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವೆಸಗಿದ್ದಾರೆ ಎಂದು ಐಎಎಸ್ ಅಧಿಕಾರಿ ಸಿಂಧೂರಿ ವಿರುದ್ಧ ನಿನ್ನೆಯಷ್ಟೇ ಗಂಭೀರ ಆರೋಪ ಮಾಡಿದ್ದ ಮಹೇಶ್, ಇಂದು ಮತ್ತೊಬ್ಬ ಹಿರಿಯ ಅಧಿಕಾರಿ ಮನೀಶ್ ಮೌದ್ಗಿಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಕೆ.ಆರ್.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭೂ ಅಕ್ರಮ ಪ್ರಕರಣದ ಮರು ತನಿಖಾ ಆದೇಶಕ್ಕೆ ಕೆಂಡಾಮಂಡಲರಾದರು. ನೀನು ಸರ್ವೇ ಕಮಿಷನರ್ ಆದ ತಕ್ಷಣ ರಾಜ್ಯಕ್ಕೆ ಸುಪ್ರೀಮಾ? ಸರ್ಕಾರಿ ಜಾಗ ಸಂರಕ್ಷಣೆಗೆ ಎಂದು ಆದೇಶದಲ್ಲಿ ಹೇಳಿದ್ದೀರಿ.