ಕರ್ನಾಟಕ

karnataka

ETV Bharat / state

ಉಪಸಭಾಪತಿ ಆತ್ಮಹತ್ಯೆ ನೆನೆದು ಕಣ್ಣೀರು ಹಾಕಿದ ಶಾಸಕ ಸಾ ರಾ ಮಹೇಶ್ - MLA Sara Mahesh news

ಕುಮಾರಣ್ಣನ ಜೊತೆ 10 ಬಾರಿ ಫೋನ್ ಮೂಲಕ ಮಾತನಾಡಿದ್ದರು. ಕೆಲವರು ಕುಟುಂಬದ ಸ್ವಾರ್ಥಕ್ಕಾಗಿ, ಅಧಿಕಾರದ ಆಸೆಗಾಗಿ, ಹಣದ ಆಸೆಗಾಗಿ ತಮ್ಮನ್ನು ತಾವು ಮಾರಿಕೊಳ್ಳೋರು ರಾಜಕೀಯದಲ್ಲಿದ್ದಾರೆ..

mysore
ಸಾ.ರಾ.ಮಹೇಶ್

By

Published : Dec 29, 2020, 1:00 PM IST

ಮೈಸೂರು :ವಿಧಾನ ಪರಿಷತ್ ಉಪ ಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಹಿನ್ನೆಲೆ ಸ್ನೇಹಿತನ್ನನ್ನು ನೆನೆದು ಶಾಸಕ ಸಾ‌ ರಾ ಮಹೇಶ್ ಕಣ್ಣೀರಿಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮೇಗೌಡ ಕುಟುಂಬ ಸಾರ್ವಜನಿಕ‌ ಸೇವೆಯಲ್ಲಿದ್ದ ಕುಟುಂಬ. ಪ್ರಮಾಣಿಕತೆ ಮತ್ತು ಪಕ್ಷ ನಿಷ್ಠೆಗೆ ಅವರ ಕುಟುಂಬ ಮಾದರಿ. ಇದು ರಾಜಕಾರಣದ ದುರ್ದೈವ. ಪರಿಷತ್ ಘಟನೆ ವಿಚಾರವಾಗಿ 17,18ನೇ ತಾರೀಖು ನೊಂದಿದ್ದರು ಎಂದರು.

ಕುಮಾರಣ್ಣನ ಜೊತೆ 10 ಬಾರಿ ಫೋನ್ ಮೂಲಕ ಮಾತನಾಡಿದ್ದರು. ಕೆಲವರು ಕುಟುಂಬದ ಸ್ವಾರ್ಥಕ್ಕಾಗಿ, ಅಧಿಕಾರದ ಆಸೆಗಾಗಿ, ಹಣದ ಆಸೆಗಾಗಿ ತಮ್ಮನ್ನು ತಾವು ಮಾರಿಕೊಳ್ಳೋರು ರಾಜಕೀಯದಲ್ಲಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ ಶಾಸಕ ಸಾ ರಾ ಮಹೇಶ್..

ಓದಿ:ಧರ್ಮೇಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ತೆರಳಿರುವ ಸಿಎಂ ಬಿಎಸ್​ವೈ

ಉಪಸಭಾಪತಿ ಸ್ಥಾನ ಅತಿ ಗೌರವದ ಸ್ಥಾನ. ಈ ರೀತಿ ಘಟನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ರಾಜಕೀಯದಲ್ಲಿದ್ದಾರೆ. ಈ ಘಟನೆ ನಡೆಯಬಾರದಿತ್ತು. ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳನ್ನು ಮಾಡೋ‌ ಸಂದರ್ಭದಲ್ಲಿ‌, ಯಾರೇ ಆದರೂ ತಮ್ಮ‌ ಇತಿ ಮಿತಿಗಳನ್ನು ಇಟ್ಟಿಕೊಳ್ಳಬೇಕು ಅನ್ನೋದು ರಾಜ್ಯದ ಜನತೆಗೆ ಇವರ ಸಾವು ಪಾಠವಾಗಿದೆ ಎಂದು ನೋವಿನಿಂದ ಹೇಳಿದರು.

ABOUT THE AUTHOR

...view details