ಮೈಸೂರು :ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬಡಾವಣೆಗೆ ಶಾಸಕ ಸಾ ರಾ ಮಹೇಶ್ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು. ಜಿಲ್ಲೆಯ ಕೆಆರ್‌ನಗರದ ಮುಸ್ಲಿಂ ಬಡಾವಣೆಯಲ್ಲಿ ಮಹಿಳೆಯೊಬ್ಬಳಿಗೆ ಕೊರೊನಾ ಸೋಂಕು ತಗುಲಿತ್ತು. ಸುದ್ದಿ ತಿಳಿದು ಶಾಸಕ ಸಾ ರಾ ಮಹೇಶ್ ಬಡಾವಣೆಗೆ ಭೇಟಿ ನೀಡಿ ಕೆಲ ಸಲಹೆ ಹಾಗೂ ಸೂಚನೆ ನೀಡಿದರು.
ಸೋಂಕು ಪತ್ತೆಯಾದ ಸ್ಥಳಕ್ಕೆ ಶಾಸಕ ಸಾ ರಾ ಮಹೇಶ್.. - Mysore latest news
ಬಡಾವಣೆಯಲ್ಲಿ ಪಾಸಿಟಿವ್ ಕಂಡು ಬಂದಿದ್ದರಿಂದ ಈ ಪ್ರದೇಶ ಸೀಲ್ಡೌನ್ ಮಾಡಲಾಗಿದೆ. ಜನ ಗಾಬರಿಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ನೀಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜನರಿಗೆ ತಿಳಿ ಹೇಳಿದರು.
ಸೀಲ್ಡೌನ್ ಪ್ರದೇಶದಕ್ಕೆ ಶಾಸಕರ ಭೇಟಿ
ಬಡಾವಣೆಯಲ್ಲಿ ಪಾಸಿಟಿವ್ ಕಂಡು ಬಂದಿದ್ದರಿಂದ ಈ ಪ್ರದೇಶ ಸೀಲ್ಡೌನ್ ಮಾಡಲಾಗಿದೆ. ಜನರು ಗಾಬರಿಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ನೀಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜನರಿಗೆ ತಿಳಿ ಹೇಳಿದ ಶಾಸಕರು, ಸೀಲ್ಡೌನ್ ಆಗಿರುವ ಪ್ರದೇಶದಲ್ಲಿ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ಗೆ ಸೂಚನೆ ನೀಡಿದರು.