ಮೈಸೂರು :ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿ ಮಾಡುತ್ತೇನೆ ಎಂದು ಹೇಳಲು ಹೆಚ್ ವಿಶ್ವನಾಥ್ ಯಾರು ಎಂದು ಶಾಸಕ ಸಾ ರಾ ಮಹೇಶ್ ಮೈಸೂರಿನಲ್ಲಿ ಪ್ರಶ್ನೆ ಮಾಡಿದ್ದಾರೆ.
ಹುಣಸೂರು ಜಿಲ್ಲೆ ಮಾಡಲು ಹೆಚ್.ವಿಶ್ವನಾಥ್ ಯಾರು.. ಸಾ ರಾ ಮಹೇಶ್ ತಿರುಗೇಟು - H. Vishwanath
ಹುಣಸೂರು ಜಿಲ್ಲೆ ಮಾಡಲು ಹುಣಸೂರಿನ ಶಾಸಕ ಹೆಚ್ ಪಿ ಮಂಜುನಾಥ್ ಹಾಗೂ ಕೆ ಆರ್ ನಗರ ಶಾಸಕ ಸಾ ರಾ ಮಹೇಶ್ ಅವರ ಅಭಿಪ್ರಾಯ ಬೇಡ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದ್ದರು.
ಇಂದು ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ಎಲ್ಲಾ ಮುಗಿಯಲಿ, ನಂತರ ಹುಣಸೂರು ಜಿಲ್ಲೆ ಮಾಡುವುದೋ ಬೇಡವೋ ಎಂಬುದನ್ನು ಜನ ಹಾಗೂ ಸರ್ಕಾರ ತೀರ್ಮಾನ ಮಾಡಲಿದೆ. ಹುಣಸೂರು ಜಿಲ್ಲೆ ಮಾಡಲು ಹುಣಸೂರಿನ ಶಾಸಕ ಹೆಚ್ ಪಿ ಮಂಜುನಾಥ್ ಹಾಗೂ ಕೆ ಆರ್ ನಗರ ಶಾಸಕ ಸಾ ರಾ ಮಹೇಶ್ ಅವರ ಅಭಿಪ್ರಾಯ ಬೇಡ ಎಂದು ಹೇಳಿದ್ದಾರೆ. ಆದರೆ, ಜನ ನನ್ನನ್ನು 3 ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಹುಣಸೂರನ್ನು ಜಿಲ್ಲೆ ಮಾಡುತ್ತೇನೆ ಎಂದು ಹೇಳಲು ವಿಶ್ವನಾಥ್ ಯಾರು ಎಂಬ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಅಲ್ಲದೇ ಹುಣಸೂರು ಜಿಲ್ಲೆ ಮಾಡಲು ವಿಶ್ವನಾಥ್ ಯಾರು? ಅವರೇನು ಜನಪ್ರತಿನಿಧಿಯೇ? ಎಂದು ಸಾ.ರಾ ಮಹೇಶ್ ಹುಣಸೂರನ್ನು ದೇವರಾಜ ಅರಸು ಜಿಲ್ಲೆಯಾಗಿ ಮಾಡುತ್ತೇನೆ ಎಂಬ ಹೆಚ್ ವಿಶ್ವನಾಥ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.