ಮೈಸೂರು:ತಮ್ಮ ವಿರುದ್ಧ ಪ್ರಮಾಣೀಕರಿಸದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸದಂತೆ ನ್ಯಾಯಾಲಯದ ಮೊರೆ ಹೋಗಿರುವ 6 ಮಂದಿ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟದಿಂದ ವಜಾಗೊಳಿಸಬೇಕು ಎಂದು ಶಾಸಕ ಸಾ.ರಾ. ಮಹೇಶ್ ಒತ್ತಾಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಕೆಟ್ಟ ಸರ್ಕಾರ ಎಂದು ಕೆಡವಿ, ಬಿಜೆಪಿ ಸರ್ಕಾರ ತರಲು ಮುಂಬೈಗೆ ಹೋಗಿ ಕುಳಿತಿದ್ದ ಇವರು ಮಾಡಿದ್ದಾದರೂ ಏನು? ಏನು ಮಾಡಿಲ್ಲ ಎಂದಾದರೆ ಇವರಿಗೆ ಅಳುಕು ಯಾಕೆ? ಸೋಮವಾರ ಅಧಿವೇಶನವಿದೆ. ಅಲ್ಲಿ ಮುಖ್ಯಮಂತ್ರಿಗಳಿಗೆ ಈ ಕುರಿತು ಮನವಿ ಮಾಡುತ್ತೇನೆ ಎಂದರು.
ಸಚಿವರನ್ನು ಬ್ಲ್ಯಾಕ್ ಮೇಲ್ ಮಾಡುವವರನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಬೇಕು. ಸಚಿವರಿಗೆ ಹೆದರಿಸುತ್ತಾರೆ ಎಂದಾದರೆ ಜನಸಾಮಾನ್ಯರ ಕಥೆ ಏನು? ತನಿಖೆ ಮಾಡಿ ಸತ್ಯಾಸತ್ಯತೆ ಹೊರಬರಲಿ ಎಂದು ಶಾಸಕ ಮಹೇಶ್ ಆಗ್ರಹಿಸಿದರು.