ಕರ್ನಾಟಕ

karnataka

ETV Bharat / state

ಬಿಎಸ್​​ವೈಗೆ ನಾನಾಗಲಿ, ಮಠಾಧೀಶರಾಗಲಿ ಬೆಂಬಲ ಕೊಡುವ ಅವಶ್ಯಕತೆ ಇಲ್ಲ: ಎಸ್‌.ಎ.ರಾಮದಾಸ್ - ಸಿಎಂ ಬದಲಾವಣೆ ಕುರಿತು ಶಾಸಕ ಎಸ್.ಎ.ರಾಮದಾಸ್ ಹೇಳಿಕೆ

ರಾಜಕಾರಣ ನಡೆಯುತ್ತೆ ಹೋಗುತ್ತೆ, ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನಹರಿಸುತ್ತಿದ್ದೇನೆ. ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ ಎಂದು ರಾಮದಾಸ್​ ಹೇಳಿದ್ದಾರೆ.

ಶಾಸಕ ಎಸ್.ಎ.ರಾಮದಾಸ್ ಹೇಳಿಕೆ
ಶಾಸಕ ಎಸ್.ಎ.ರಾಮದಾಸ್ ಹೇಳಿಕೆ

By

Published : Jul 24, 2021, 3:54 PM IST

ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ‌. ನಾನಾಗಲಿ, ಮಠಾಧೀಶರಾಗಲಿ ಬೆಂಬಲ, ಕೊಡುವ ಅವಶ್ಯಕತೆ ಇಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಶಾಸಕ ಎಸ್.ಎ.ರಾಮದಾಸ್ ಹೇಳಿಕೆ

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ದರಾಗಿದ್ದಾರೆ. ನಾನು ಯಡಿಯೂರಪ್ಪ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಸಿಎಂ ಬಿಎಸ್​ವೈ ನನ್ನ ತಂದೆಯ ಸಮಾನರು, ನಿರಂತರವಾಗಿ ನನ್ನನ್ನು ಯುವಮೋರ್ಚಾ ಅಧ್ಯಕ್ಷನನ್ನಾಗಿಸಿ ನನ್ನನ್ನು ಬೆಳೆಸಿದವರು. ಬಿಎಸ್​ವೈ ರೈಲ್ವೆ ಇಂಜಿನ್, ನಾವು ಬೋಗಿಗಳ ರೀತಿ ಅವರನ್ನ ಅನುಸರಿಸುತ್ತೇವೆ ಎಂದರು.

ರಾಜಕಾರಣ ನಡೆಯುತ್ತೆ ಹೋಗುತ್ತೆ, ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನಹರಿಸುತ್ತಿದ್ದೇನೆ. ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ. ರಾಜಕಾರಣ ಹರಿಯುವ ನೀರು, ಯಾರು ಹೋಗ್ತಾರೆ ಯಾರು ಬರ್ತಾರೆ ಅನ್ನೊ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.

ಇದನ್ನೂ ಓದಿ : ನಾಯಕತ್ವ ಬದಲಾವಣೆ ಬಗ್ಗೆ ಏನು ಮಾತನಾಡುವುದಿಲ್ಲ, wait and see: ಸಚಿವ ಜಗದೀಶ್ ಶೆಟ್ಟರ್

ABOUT THE AUTHOR

...view details