ಮೈಸೂರು: ಸಂಕ್ರಾಂತಿ ಹಬ್ಬದ ನಂತರ ಸಂಪುಟ ಪುನಾರಚನೆಯಾಗುವ ನಿರೀಕ್ಷೆ ಇದೆ. ಆ ಹಬ್ಬದ ನಂತರ ಮೈಸೂರಿಗೆ ಸಿಹಿಸುದ್ದಿ ಬರಲಿ ಎನ್ನುವುದು ನಮ್ಮೆಲ್ಲ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಶಾಸಕ ಎಸ್. ಎ ರಾಮದಾಸ್ ಪರೋಕ್ಷವಾಗಿ ಸಚಿವನಾಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸ್ಥಾನ ಸಿಗಲಿ ಎಂಬ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದೇನೆ. 1994ರಿಂದ ಪಕ್ಷ ನನ್ನನ್ನು ಗೆಲ್ಲಿಸಿಕೊಂಡು ಬಂದಿದೆ. ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಎಂದರು.