ಮೈಸೂರು :ಬೆಂಗಳೂರು ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ನ ದೊಡ್ಡ ಮಟ್ಟದ ಇಂಡಸ್ಟ್ರಿಯೇ ಇದೆ. ಈಗ ಅದು ಇನ್ನೂ ಹೆಚ್ಚಾಗಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಅಂತಾನೇ ಏನೂ ಇಲ್ಲ, ಬೆಂಗಳೂರು ನಗರದಲ್ಲಿ ಗಾಂಜಾ ಮತ್ತು ಡ್ರಗ್ಸ್ನ ದೊಡ್ಡ ಮಟ್ಟದ ಇಂಡಸ್ಟ್ರಿಯೇ ಇದೆ. ಈಗಂತೂ ಅದು ಹೆಚ್ಚಾಗಿದೆ. ನಾವು ಬೆಂಗಳೂರು ಕಮಿಷನರ್ ಭೇಟಿ ಮಾಡಿ ಡ್ರಗ್ಸ್ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ವೈಯಕ್ತಿಕವಾಗಿ ಒತ್ತಾಯ ಮಾಡಿದ್ದೇನೆ ಎಂದಿದ್ದಾರೆ.