ಮೈಸೂರು :ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಹಿರಿಯ ಶಾಸಕ ಎಸ್.ಎ ರಾಮದಾಸ್ ಅಸಮಧಾನ ವ್ಯಕ್ತಪಡಿಸಿದ್ದು,ಆ ವ್ಯಕ್ತಿಯ ಕಾಲ್ ನಿಂದ ಸಚಿವ ಸ್ಥಾನ ತಪ್ಪಿತು ಎಂದಿದ್ದಾರೆ.
ಮೈಸೂರಿನ ಕೆ.ಆರ್ ವಿಧಾನಸಭಾ ಕ್ಷೇತ್ರದ ವಿಶ್ವೇಶ್ವರ ನಗರದಲ್ಲಿ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ನನ್ನ ತಲೆ ಮೇಲೆ ಕೈ ಇಟ್ಟು ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದರು.
ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೂಡ ನೀವು (ರಾಮದಾಸ್) ಸೀನಿಯರ್ ಮೋಸ್ಟ್ ಇದ್ದೀರಿ, ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ದೆಹಲಿಗೆ ಆ ವ್ಯಕ್ತಿ ಕರೆ ಮಾಡಿದ್ದರಿಂದ ನನ್ನ ಹೆಸರನ್ನು ಲಿಸ್ಟ್ನಿಂದ ತೆಗೆಯಲಾಯಿತು ಎಂದು ಹೇಳಿದರು.