ಕರ್ನಾಟಕ

karnataka

ETV Bharat / state

ಬಿಜೆಪಿಗೆ ನನ್ನ ಬೆಂಬಲವಿದೆ.. ಸಚಿವ ಸ್ಥಾನ ಸಿಕ್ಕರೆ ಖುಷಿ; ಶಾಸಕ ಎನ್.‌ ಮಹೇಶ್ - ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶಾಸಕ ಎನ್‌ ಮಹೇಶ್ ಪ್ರತಿಕ್ರಿಯೆ

ಸಚಿವರಾಗಬೇಕೆಂದು ಯಾರಿಗೆ ತಾನೇ ಅಪೇಕ್ಷೆ ಇರಲ್ಲ, ಮುಖ್ಯಮಂತ್ರಿಗಳ ಮೇಲೆ ನಾನು ಭರವಸೆ ಇಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರನ್ನು ನಾನು ಬೆಂಬಲಿಸುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್‌‌. ಮಹೇಶ್ ಹೇಳಿದ್ದಾರೆ.

mla n mahesh said he will support bjp
ಶಾಸಕ ಎನ್‌ ಮಹೇಶ್ ಹೇಳಿಕೆ

By

Published : Jan 11, 2021, 12:52 PM IST

ಮೈಸೂರು: ಬಿಜೆಪಿಗೆ ನನ್ನ ಬೆಂಬಲ ಇದ್ದೇ ಇದೆ, ಕ್ಷೇತ್ರದ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರನ್ನು ನಾನು ಬೆಂಬಲಿಸುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್‌‌ .ಮಹೇಶ್ ತಿಳಿಸಿದರು.

ಶಾಸಕ ಎನ್‌. ಮಹೇಶ್ ಹೇಳಿಕೆ

ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರಾಗಬೇಕೆಂದು ಯಾರಿಗೆ ತಾನೇ ಅಪೇಕ್ಷೆ ಇಲ್ಲ ಹೇಳಿ. ಸಚಿವ ಸ್ಥಾನ ಕೊಟ್ಟರೆ ನನ್ನ ಕ್ಷೇತ್ರ, ಜಿಲ್ಲೆಗೆ ಹೆಚ್ಚಿನ ಕೆಲಸ ಮಾಡಲು ಅನುಕೂಲ ಆಗುತ್ತೆ‌. ಆದರೆ, ನನಗೆ ಸಚಿವ ಸ್ಥಾನ ಕೊಡಬೇಕೆಂದು ಚರ್ಚೆ ನಡೆಸಿಲ್ಲ ಎಂದರು.

ಜನವರಿ 13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಆ ದಿನ ಕಾದು ನೋಡಬೇಕಿದೆ. ಮುಖ್ಯಮಂತ್ರಿಗಳ ಮೇಲೆ ನಾನು ಭರವಸೆ ಇಟ್ಟಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಮೈಸೂರು ಚಾಮುಂಡಿ ತಾಯಿ ದರ್ಶನ ಪಡೆದ ಸಿಎಂ ಯಡಿಯೂರಪ್ಪ

ABOUT THE AUTHOR

...view details