ಮೈಸೂರು: ಹುಚ್ಚಗಣಿ ದೇವಾಲಯ ಉಳಿಸಲು ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ದೇವಸ್ಥಾನ ಉಳಿಸಲು ಸರಿಯಾದ ದಾಖಲೆ ಇಲ್ಲದ ಕಾರಣ ಜಿಲ್ಲಾಧಿಕಾರಿಗಳ ಒತ್ತಡಕ್ಕೆ ಮಣಿದು ದೇವಾಲಯ ನೆಲಸಮ ಮಾಡಲಾಯಿತು ಎಂದು ಶಾಸಕ ಹರ್ಷವರ್ಧನ್ ಆರೋಪಿಸಿದ್ದಾರೆ.
ಹುಚ್ಚಗಣಿ ದೇವಾಲಯ ಉಳಿಸಲು ನಾನು ಹಾಗೂ ತಹಶೀಲ್ದಾರ್ ಪ್ರಯತ್ನಿಸಿದ್ದು, ಜಿಲ್ಲಾಧಿಕಾರಿಗಳಿಗೆ ಪಾಸಿಟಿವ್ ರಿಪೋರ್ಟ್ ನೀಡಲಾಗಿತ್ತು. ಆದರೆ, ಜಿಲ್ಲಾಧಿಕಾರಿಗಳು ಯಾವ ಉದ್ದೇಶಕ್ಕಾಗಿ ದೇವಾಲಯ ಉಳಿಸಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದಾಗ ನಮ್ಮ ಬಳಿ ಬಲವಾದ ಕಾರಣ ಹಾಗೂ ಸಮರ್ಪಕ ದಾಖಲೆಗಳು ಇರಲಿಲ್ಲ.
ಜಿಲ್ಲಾಧಿಕಾರಿಗಳ ಒತ್ತಡಕ್ಕೆ ಮಣಿದು ದೇವಾಲಯ ನೆಲಸಮ: ಶಾಸಕ ಹರ್ಷವರ್ಧನ್ ಆರೋಪ ಎಲ್ಲ ಕಡೆ ದೇವಾಲಯ ತೆರವುಗೊಳಿಸಿದ್ದೇವೆ, ಮಹದೇವಮ್ಮ ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿ ಇಲ್ಲ. ಆದ್ದರಿಂದ ದೇವಸ್ಥಾನ ತೆರವು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಇದರಿಂದಾಗಿ ದೇವಾಲಯ ನೆಲಸಮ ಮಾಡಲಾಯಿತು ಎಂದಿದ್ದಾರೆ.
ಸರ್ಕಾರದ ಆದೇಶಕ್ಕೆ ತಲೆಬಾಗಲೇಬೇಕು
ಹುಚ್ಚಗಣಿ ದೇವಾಲಯ ನೆಲಸಮ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖಾ ತಂಡ ನಿಯೋಜನೆ ಮಾಡಲಾಗಿತ್ತು. ತನಿಖಾ ತಂಡದ ಮಾಹಿತಿ ಆಧಾರದ ಮೇಲೆ ಸರ್ಕಾರ ತಹಶೀಲ್ದಾರ್ ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಿದೆ. ತಹಶೀಲ್ದಾರ್ ವರ್ಗಾವಣೆ ಹಾಗೂ ದೇವಾಲಯ ನೆಲಸಮ ಎರಡು ವಿಚಾರಗಳು ನೋವು ತರಿಸುತ್ತದೆ. ಆದರೆ ಸರ್ಕಾರದ ನಿಲುವಿಗೆ ಬದ್ಧವಾಗಿರಬೇಕು. ಕಳೆದ 10 ತಿಂಗಳಿಂದ ತಹಶೀಲ್ದಾರ್ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಿದ್ದರು ಎಂದರು.
ಇದನ್ನೂ ಓದಿ:ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಒಂದೇ ಕುಟುಂಬದ ಮೂವರ ಕಗ್ಗೊಲೆ