ಕರ್ನಾಟಕ

karnataka

ಜೆಡಿಎಸ್-ಕಾಂಗ್ರೆಸ್ ಒಪ್ಪಂದವೇ ಶ್ರೀನಿವಾಸ್ ಸೋಲಿಗೆ ಕಾರಣ : ಶಾಸಕ ಹರ್ಷವರ್ಧನ್​

By

Published : Dec 21, 2020, 2:23 PM IST

ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಸೋಲಿಸಲು ಕಾಂಗ್ರೆಸ್ -ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಹೇಳಿದ್ದಾರೆ.

ನಂಜನಗೂಡು ಶಾಸಕ ಹರ್ಷವರ್ಧನ್
ನಂಜನಗೂಡು ಶಾಸಕ ಹರ್ಷವರ್ಧನ್

ಮೈಸೂರು:2017ರಲ್ಲಿ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರನ್ನು ಸೋಲಿಸಲು ಕಾಂಗ್ರೆಸ್ -ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಪ್ರಸಾದ್ ಅವರು ಸಚಿವರಾಗಿದ್ದಾಗ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳುತ್ತಿದ್ದರು. ಆದರೆ, ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಾಗ ಅವರು ಬಹಳ‌ ನೊಂದರು. ಉಪಚುನಾವಣೆಯಲ್ಲಿ ಸರ್ಕಾರವೇ ಅವರ ವಿರುದ್ಧ ನಿಂತಿತ್ತು. ಕೊನೆಗೆ ಸೋಲಾಯಿತು. ಆಗ ಜೆಡಿಎಸ್-ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದ್ದರೇ? ಚಾಮುಂಡೇಶ್ವರಿಯಲ್ಲಿ ಸೋತಾಗ ಸಿದ್ದರಾಮಯ್ಯ ಅವರಿಗೆ ಅರಿವಾಯಿತೇ? ಎಂದು ಕುಟುಕಿದರು.

ನಂಜನಗೂಡು ಶಾಸಕ ಹರ್ಷವರ್ಧನ್ ಪ್ರತಿಕ್ರಿಯೆ

ಸಿದ್ದರಾಮಯ್ಯ ಅವರಿಗೆ ನೋವು ಈಗ ಅರ್ಥವಾಗುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಲು ಅವರಿಗೆ ಮನಸ್ಸು ಆಗುತ್ತಿಲ್ಲ. ಈ ವಿಚಾರವಾಗಿ ಭಾವನಾತ್ಮಕ ಮಾತುಗಳನ್ನಾಡಿರಬಹುದು. ಬೇರೆ ಕ್ಷೇತ್ರಕ್ಕೆ ಹೋಗಲು ಅವರಿಗೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಒಳ್ಳೆಯ ಬೆಳವಣಿಗೆ: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಒಳ್ಳೆಯ ಬೆಳವಣಿಗೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಮಾಜವಾದಿ ಪಾರ್ಟಿ ಹೊಂದಾಣಿಕೆ ಮಾಡಿಕೊಂಡಾಗ, ಸಮಾಜವಾದಿ ಪಾರ್ಟಿ ಏನಾಯಿತು? ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ನೆಲ ಕಚ್ಚಬೇಕಾಗುತ್ತದೆ. ಆದರಿಂದ ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನವಾದರೆ ಒಳ್ಳೆಯ ಬೆಳವಣಿಗೆ ಎಂದರು.

ಮುಂದೊಂದು ದಿನ‌ ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಗೆ ಬರಬಹುದು ಎಂದರು. ಈಗಾಗಲೇ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಮೈಸೂರು ಭಾಗದಲ್ಲಿ‌ ಬಿಜೆಪಿ ಗಟ್ಟಿಗೊಳ್ಳುತ್ತಿದೆ‌. ಮುಂದಿನ ದಿನಗಳಲ್ಲಿ ಪಕ್ಷೇತರವಾಗಿ ಅವರು ಚುನಾವಣೆ ಮಾಡುವುದು ಕಷ್ಟ. ಮಂಡ್ಯದಲ್ಲಿ ಬಿಜೆಪಿ ಗಟ್ಟಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ಹರ್ಷವರ್ಧನ್​ ಹೇಳಿದರು.

ABOUT THE AUTHOR

...view details