ಕರ್ನಾಟಕ

karnataka

ETV Bharat / state

ಶಾಸಕ ಹರ್ಷವರ್ಧನ್ ರಿಂದ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹ..

ರಾಜ್ಯದಲ್ಲಿ ಭೀಕರ ಪ್ರವಾಹದಿಂದಾಗಿ ಸಾಕಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆ ಸಂತ್ರಸ್ತರ ಪರಿಹಾರಕ್ಕೆ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿ ಪರಿಹಾರ  ನಿಧಿಗೆ ತಲುಪಿಸುವ ಉದ್ದೇಶದಿಂದಾಗಿ ಶಾಸಕ‌ ಹರ್ಷವರ್ಧನ್ ಅವರು ದೇಣಿಗೆ ಸಂಗ್ರಹ‌‌ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಶಾಸಕ ಹರ್ಷವರ್ಧನ್ ರಿಂದ ದೇಣಿಗೆ ಸಂಗ್ರಹ

By

Published : Aug 16, 2019, 6:11 PM IST

ಮೈಸೂರು:ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ನಂಜನಗೂಡು ಕ್ಷೇತ್ರದ ಶಾಸಕ‌ ಹರ್ಷವರ್ಧನ್ ಅವರು ದೇಣಿಗೆ ಸಂಗ್ರಹ‌‌ ಮಾಡಿದರು.

ಹರ್ಷವರ್ಧನ್ ಅವರ ನೇತೃತ್ವದಲ್ಲಿ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಾದ ರಾಷ್ಟ್ರಪತಿ ಮತ್ತು ಮಹಾತ್ಮ ಗಾಂಧಿ ರಸ್ತೆ ಮುಖಾಂತರ ನಿಧಿ ಸಂಗ್ರಹಿಸಲಾಯಿತು.

ಶಾಸಕ ಹರ್ಷವರ್ಧನ್ ರಿಂದ ದೇಣಿಗೆ ಸಂಗ್ರಹ..

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆ ಹಾನಿಯಿಂದ ಉಂಟಾಗಿರುವ ನೆರೆಯ ಸಂತ್ರಸ್ತರ ಸಮಸ್ಯೆಯ ಪರಿಹಾರಕ್ಕೆ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೇರವಾಗಿ ತಲುಪಿಸಲಾಗುವುದು ಎಂದರು. ಕಳೆದ ಬಾರಿ ಕೊಡಗು ಸಂತ್ರಸ್ತರಿಗೆ ಸುಮಾರು 9 ಲಕ್ಷದ 80 ಸಾವಿರ ರೂಪಾಯಿ ನೀಡಿದೆವು. ಈ ಬಾರಿ ಅದಕ್ಕಿಂತ ಹೆಚ್ಚು ನಿಧಿ ಸಂಗ್ರಹಿಸಿಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details