ಮೈಸೂರು :ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ಯಾವಾಗ ಬೇಕಾದರೂ ಬದಲಾವಣೆ ಆಗಬಹುದು. ಸದ್ಯಕ್ಕೆ ಯಾವುದೇ ಬದಲಾವಣೆಗಳಾಗುವುದಿಲ್ಲ ಅಂತಾ ಅನ್ಸುತ್ತೆ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.
ನಗರದ ಬನ್ನಿಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ದೊಡ್ಡ ಮಟ್ಟದ ಪಕ್ಷಾಂತರ ಆಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರು ಪಕ್ಷಗಳು ಸಮರ್ಥವಾಗಿವೆ. ಮೂರು ಪಕ್ಷಗಳಲ್ಲು ಜಿದ್ದಾಜಿದ್ದಿ ಪೈಪೋಟಿ ಇದೆ. ಹೀಗಾಗಿ, ದೊಡ್ಡ ಮಟ್ಟದ ಪಕ್ಷಾಂತರ ಲಕ್ಷಣ ಕಾಣುತ್ತಿಲ್ಲ ಎಂದರು.
ಮೂರು ಪಕ್ಷಗಳಲ್ಲಿ ಎಲ್ಲರಿಗೂ ಸ್ನೇಹಿತರು ಇದ್ದಾರೆ. ಹಾಗಾಗಿ, ಊಟಕ್ಕೆ ಸೇರ್ತಾರೆ, ಕೆಲವರು ಕಾರ್ಡ್ ಆಡಲು, ಪಾರ್ಟಿಗೆ ಸೇರುತ್ತಾರೆ. ಇದರಲ್ಲಿ ರಾಜಕೀಯ ಇರುವುದಿಲ್ಲ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಇದೆ. ಇಷ್ಟು ಬೇಗ ಪಕ್ಷಾಂತ ಮಾತು ಏಕೆ? ಎಂದರು.