ಕರ್ನಾಟಕ

karnataka

ETV Bharat / state

ಹೆಚ್​​ಡಿಕೆಗೆ ಸೆಡ್ಡು ಹೊಡೆದ ದೇವೇಗೌಡ: ಸಾರಾಗೆ ಟಕ್ಕರ್​​ ನೀಡಿ ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದ ಜಿಟಿಡಿ - ಶಾಸಕ ಜಿ ಟಿ ದೇವೇಗೌಡ

ಮೈಮುಲ್ ಚುನಾವಣೆಯಲ್ಲಿ ಜಿಟಿಡಿ ಬಣವನ್ನು ಸೋಲಿಸಿ, ಎಟಿಗೆ-ಎದುರೇಟು ನೀಡಲೇ ಬೇಕೆಂದು ಹೆಚ್‌‌.ಡಿ.ಕೆ ಹಾಗೂ ಶಾಸಕ ಸಾ.ರಾ.ಮಹೇಶ್ ಪಟ್ಟ ಕಷ್ಟ ಈಗ ಫಲಿಸಿಲ್ಲ. ಸಹಕಾರಿ ಕೇತ್ರದಲ್ಲಿ ನನಗೆ 50 ವರ್ಷದ ಅನುಭವ ಇದೆ ಎನ್ನುವುದನ್ನ ಜಿಟಿಡಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

MLA G T Deve Gowda faction wins in Mymul election
ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೇರೆದ ಜಿ ಟಿ ದೇವೇಗೌಡ

By

Published : Mar 17, 2021, 6:52 AM IST

Updated : Mar 17, 2021, 8:28 AM IST

ಮೈಸೂರು:ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕ ಸಾರಾ ಮಹೇಶ್​ಗೆ ಟಕ್ಕರ್ ಕೊಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಎಷ್ಟಿದೆ ಎಂದು ಜೆಡಿಎಸ್ ದಳಪತಿಗಳಿಗೆ ಶಾಸಕ ಜಿ ಟಿ ದೇವೇಗೌಡ ತೋರಿಸಿ ಕೊಟ್ಟಿದ್ದಾರೆ.

ಹೌದು, ಮೈಸೂರು ಮೇಯರ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಂತೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಹಾಗೂ ಸಾ.ರಾ ಮಹೇಶ್, ಮೈಮುಲ್ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಲು ಮುಂದಾಗಿದ್ದರು. ಆದರೆ, ಅದೇ ರಿವರ್ಸ್ ಆಗಿದ್ದು, ಈಗ ಇಬ್ಬರು ನಾಯಕರು ಭಾರಿ ಮುಖಭಂಗ ಅನುಭವಿಸಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೇರೆದ ಜಿ ಟಿ ದೇವೇಗೌಡ

ಮೈಮುಲ್ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ, ಹೇಗಾದರೂ ಮಾಡಿ ಜಿ.ಟಿ.ದೇವೇಗೌಡರ ಪ್ರಾಬಲ್ಯ ತಗ್ಗಿಸಿ ಅವರಿಗೆ ಮುಖಭಂಗ ಮಾಡಬೇಕು ಎಂಬ ಉದ್ದೇಶದಿಂದ ಹೆಚ್ ಡಿ ಕೆ ಮೈಸೂರಿನಲ್ಲಿ ಪ್ರವಾಸ ಕೈಗೊಂಡು ಜಿ.ಟಿ.ಡಿ. ವಿರುದ್ಧ ತಿರುಗಿ ಬಿದ್ದಿದ್ದರು‌. ಸಾ.ರಾ ಮಹೇಶ್ ಕೂಡ ಹೆಚ್​ಡಿಕೆ ಜೊತೆ ನಿಂತು, ಶ್ರಮಿಸಿದ್ದರು. ಆದರೆ, ಮೈಮುಲ್ ಫಲಿತಾಂಶದಲ್ಲಿ ಜಿಟಿಡಿ ಬಣದ 12 ಜನ ಗೆಲುವು ಸಾಧಿಸಿದ್ದು, ನನ್ನ 'ಸಹಕಾರ'ವಿಲ್ಲದೆ ಮೈಸೂರಿನಲ್ಲಿ ಪಕ್ಷ ಬೆಳೆಯುವುದು ಕಷ್ಟವೆಂದು ತೋರಿಸಿದ್ದಾರೆ.

ಓದಿ : ಮೈಮುಲ್ ಚುನಾವಣೆಗೆ ನಾನು ಧುಮುಕ್ಕಿಲ್ಲ: ಜಿ.ಟಿ.ದೇವೇಗೌಡ

ಮೈಮುಲ್ ಚುನಾವಣೆಯಲ್ಲಿ ಜಿಟಿಡಿ ಬಣವನ್ನು ಸೋಲಿಸಿ, ಎಟಿಗೆ - ಎದುರೇಟು ನೀಡಲೇಬೇಕೆಂದು ಹೆಚ್‌‌.ಡಿ.ಕೆ ಹಾಗೂ ಶಾಸಕ ಸಾ.ರಾ.ಮಹೇಶ್ ಪಟ್ಟ ಕಷ್ಟ ಈಗ ಫಲಿಸಿಲ್ಲ. ಸಹಕಾರಿ ಕೇತ್ರದಲ್ಲಿ ನನಗೆ 50 ವರ್ಷದಿಂದ ಅನುಭವ ಇದೆ ಎನ್ನುವುದನ್ನ ಜಿಟಿಡಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Last Updated : Mar 17, 2021, 8:28 AM IST

For All Latest Updates

ABOUT THE AUTHOR

...view details