ಕರ್ನಾಟಕ

karnataka

ETV Bharat / state

ಕಾಡಂಚಿನ ಗ್ರಾಮದಲ್ಲಿ ಮಧ್ಯರಾತ್ರಿ ಶಾಸಕ ದರ್ಶನ್ ಧ್ರುವನಾರಾಯಣ್ ವಾಸ್ತವ್ಯ.. ಜನರಿಂದ ಮೆಚ್ಚುಗೆ - ಶಾಸಕ ದರ್ಶನ್ ಧ್ರುವನಾರಾಯಣ್

ಶಾಸಕ ದರ್ಶನ್ ಧ್ರುವನಾರಾಯಣ್​ ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮವಾದ ದೇಪೇಗೌಡನಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

ಶಾಸಕ ದರ್ಶನ್ ಧ್ರುವನಾರಾಯಣ್​
ಶಾಸಕ ದರ್ಶನ್ ಧ್ರುವನಾರಾಯಣ್​

By ETV Bharat Karnataka Team

Published : Oct 1, 2023, 1:34 PM IST

Updated : Oct 1, 2023, 1:45 PM IST

ಕಾಡಂಚಿನ ಗ್ರಾಮದಲ್ಲಿ ಮಧ್ಯರಾತ್ರಿ ಶಾಸಕ ದರ್ಶನ್ ಧ್ರುವನಾರಾಯಣ್ ವಾಸ್ತವ್ಯ

ಮೈಸೂರು:ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಡಂಚಿನ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಶಾಸಕ ದರ್ಶನ್ ಧ್ರುವನಾರಾಯಣ್ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಹೌದು.. ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮವಾದ ದೇಪೇಗೌಡನಪುರ ಗ್ರಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕ ದರ್ಶನ್ ಧ್ರುವನಾರಾಯಣ್​​ ಮಧ್ಯರಾತ್ರಿಯಲ್ಲಿ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು. ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ಹಾಗೂ ಹುಲಿ ಚಿರತೆ ಇನ್ನಿತರ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ರೈತರ ಜಮೀನುಗಳಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ ಎಂದು ರೈತರು ತಡ ರಾತ್ರಿಯ ಸಮಯದಲ್ಲಿ ಶಾಸಕರಿಗೆ ದೂರವಾಣಿ ಮೂಲಕ ಕರೆ ಮಾಡಿ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರು.

ಇದಕ್ಕೆ ಕೂಡಲೇ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್, ಖುದ್ದು ಸ್ಥಳಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಕಾಡುಪ್ರಾಣಿಗಳು ಬರುವ 27 ಜಾಗಗಳಿಗೂ ತೆರಳಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ 19 ಕಿಲೋ ಮೀಟರ್ ತನಕ ರೈಲ್ವೆ ಕಂಬಿ ಅಳವಡಿಸಲಾಗುವುದು. ಹಾಗೂ ಹುಲಿ ಮತ್ತು ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳದಲ್ಲಿಯೇ ರೈತರ ಸಮಸ್ಯೆಗಳನ್ನು ಆಲಿಸಿ, ಮುಂದಿನ ದಿನಗಳಲ್ಲಿ ಸದನದಲ್ಲಿ ಸಚಿವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಇನ್ನು ಮಧ್ಯರಾತ್ರಿಯಲ್ಲಿ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ದೇಪೇಗೌಡನಪುರ ಗ್ರಾಮಸ್ಥರಿಗೆ, ಅಕ್ಕಪಕ್ಕದ ಊರಿನವರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೇನೆ. ನಮಗೆ ನಿರಂತರವಾಗಿ ರಾತ್ರಿ ಕರೆ ಮಾಡುವುದು ಹೆಚ್ಚು. ಜನ ಸಂಪರ್ಕ ಸಭೆ ಮಾಡಿದ ಮೇಲೂ ಕರೆಗಳು ಬರುತ್ತಿದ್ದವು. ಹೀಗಾಗಿ ನಾವೇ ಬಂದು ಇವರ ಸಮಸ್ಯೆ ಬಗ್ಗೆ ತಿಳಿದುಕೊಳ್ಳದೇ ಹೋದರೆ ನಮ್ಮ ಕಡೆಯಿಂದ ತಪ್ಪಾಗುತ್ತದೆ. ಈ ಜನತೆ ನಮಗೆ ಐತಿಹಾಸಿಕ ಮತಗಳ ಗೆಲುವು ಕೊಟ್ಟಿದ್ದಾರೆ. ಆದ್ದರಿಂದ ನನ್ನ ಜವಾಬ್ದಾರಿ ಹೆಚ್ಚಿರುತ್ತದೆ. ಇದು ನನ್ನ ಕರ್ತವ್ಯ ಕೂಡ. ನನ್ನ ಜನತೆಯ ರಕ್ಷಣೆಗೆ ನಾನು ನಿಲ್ಲಬೇಕಾಗುತ್ತದೆ. ಹೀಗಾಗಿ ನಾನೇ ಖುದ್ದು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸರ್ಕಾರದ ಜೊತೆಗೆ ಈ ಕುರಿತು ಮಾತನಾಡಿ ಆಗಿದೆ. ಅತೀ ಶೀಘ್ರದಲ್ಲೇ ಎಲ್ಲವನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಮಾಜಿ ಶಾಸಕ ಅಶ್ವಥ್ ಜೊತೆ ಸಂಸದ ಡಿ ಕೆ ಸುರೇಶ್ ಮಾತುಕತೆ: ಅ.2ಕ್ಕೆ ಕಾಂಗ್ರೆಸ್​ ಪಕ್ಷ ಸೇರ್ಪಡೆ ಪಕ್ಕಾ

Last Updated : Oct 1, 2023, 1:45 PM IST

ABOUT THE AUTHOR

...view details