ಮೈಸೂರು:ಮೃತ ವ್ಯಕ್ತಿ ಹೆಸರು ಹಾಗೂ ಪ್ರತಾಪ್ ಸಿಂಹ ಅವರನ್ನು ಚಾಮರಾಜನಗರ ಸಂಸದ ಎಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಮೂಲಕ ದಸರಾ ಕವಿಗೋಷ್ಠಿ ಆಯೋಜಕರು ಎಡವಟ್ಟು ಮಾಡಿದ್ದಾರೆ.
ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ ಹೆಸರು ಪ್ರಕಟ ಮಾಡಲಾಗಿದೆ. ಆಕಾಶವಾಣಿ ನಿಲಯ ನಿರ್ದೇಶಕರು ಹಾಗೂ ಸಾಹಿತಿಯಾಗಿದ್ದ ರವೀಂದ್ರ ಕುಮಾರ್ ಅವರು, 2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರ ಹೆಸರನ್ನು ಕವಿಗೋಷ್ಠಿ ಆಯೋಜಕರು ಮುದ್ರಿಸಿದ್ದಾರೆ. ಪ್ರಮಾದ ಅರಿವಾಗುತ್ತಿದ್ದಂತೆ ದಸರಾ ಸಮಿತಿ ಮರು ಪಟ್ಟಿ ಬಿಡುಗಡೆ ಮಾಡಿದೆ.