ಮೈಸೂರು: ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಹೆಡ್ ವಾಟರ್ ಟ್ಯಾಂಕ್ಗೆ ಮಿಶ್ರಣವಾಗಿದ್ದ ಕ್ರಿಮಿನಾಶಕ ನೀರನ್ನು ಕುಡಿದಿದ್ದಾರೆ ಗ್ರಾಮದಲ್ಲಿ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹೇಳಿದರು.
ಕುರಹಟ್ಟಿ ಗ್ರಾಮದಲ್ಲಿ ದೊಡ್ಡ ಅನಾಹುತವೇ ತಪ್ಪಿದೆ: ಎಸ್ಪಿ ರಿಷ್ಯಂತ್ - ವಾಟರ್ ಟ್ಯಾಂಕ್ಗೆ ಮಿಶ್ರಣವಾಗಿದ್ದ ಕ್ರಿಮಿನಾಶಕ
50 ಸಾವಿರ ಲೀಟರ್ ಇರುವ ಹೆಡ್ ವಾಟರ್ ಟ್ಯಾಂಕರ್ಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ. ಕೂಡಲೇ ಗ್ರಾಮದ ಮುಖಂಡರೊಂದಿಗೆ ಹೋಗಿ ನೀರು ಬಳಸದಂತೆ ಗ್ರಾಮಸ್ಥರಿಗೆ ಹೇಳಿ ಟ್ಯಾಂಕ್ನಿಂದ ನೀರು ಬಂದ್ ಮಾಡಿ ಅನಾಹುತ ತಪ್ಪಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
![ಕುರಹಟ್ಟಿ ಗ್ರಾಮದಲ್ಲಿ ದೊಡ್ಡ ಅನಾಹುತವೇ ತಪ್ಪಿದೆ: ಎಸ್ಪಿ ರಿಷ್ಯಂತ್ missed-a-big-disaster-in-kurahatti-village-sp-rishyant](https://etvbharatimages.akamaized.net/etvbharat/prod-images/768-512-11477384-thumbnail-3x2-sdfghf.jpg)
ಎಸ್ಪಿ ರಿಷ್ಯಂತ್
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 50 ಸಾವಿರ ಲೀಟರ್ ಇರುವ ಹೆಡ್ ವಾಟರ್ ಟ್ಯಾಂಕರ್ಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ. ಕೂಡಲೇ ಗ್ರಾಮದ ಮುಖಂಡರೊಂದಿಗೆ ಹೋಗಿ ನೀರನ್ನು ಬಳಸದಂತೆ ಗ್ರಾಮಸ್ಥರಿಗೆ ಹೇಳಿ ಟ್ಯಾಂಕ್ನಿಂದ ನೀರು ಬಂದ್ ಮಾಡಿ ಅನಾಹುತ ತಪ್ಪಿಸಲಾಗಿದೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ರಿಷ್ಯಂತ್
ಪಿಡಿಒ ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಯಾರ ಮೇಲೂ ಅನುಮಾನವಿಲ್ಲ ವಿಚಾರಣೆ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.