ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಮನೆಮನೆಗೆ ಹಣ್ಣು, ತರಕಾರಿ ಪೂರೈಕೆ: ಸಚಿವ ವಿ. ಸೋಮಣ್ಣ ಚಾಲನೆ - Mysore Metropolitan Policy

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರಿಂದ ಮೈಸೂರು ಮಹಾನಗರ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಎಲ್ಲಾ ವಾರ್ಡ್​ಗಳು ಹಾಗೂ ಬಡಾವಣೆಗಳ ಮನೆಮನೆಗೆ ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವಾಹನಗಳಿಗೆ ಚಾಲನೆ

Minister V.Somanna inaugurated to municipality vegitable vehicle
ಮನೆಮನೆಗೆ ಹಣ್ಣು, ತರಕಾರಿ ಪೂರೈಕೆ ಮಾಡುವ ವಾಹನಗಳಿಗೆ ಸಚಿವ ವಿ. ಸೋಮಣ್ಣ ಚಾಲನೆ

By

Published : Apr 2, 2020, 9:39 AM IST

Updated : Apr 2, 2020, 11:23 AM IST

ಮೈಸೂರು:ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಎಲ್ಲಾ ವಾರ್ಡ್​ಗಳು ಹಾಗೂ ಬಡಾವಣೆಗಳ ಮನೆಮನೆಗೆ ಹಣ್ಣು, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವ ವಾಹನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಲನೆ ನೀಡಿದರು.

ಮನೆಮನೆಗೆ ಹಣ್ಣು, ತರಕಾರಿ ಪೂರೈಕೆ ಮಾಡುವ ವಾಹನಗಳಿಗೆ ಸಚಿವ ವಿ. ಸೋಮಣ್ಣ ಚಾಲನೆ

ತರಕಾರಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ್ಯಾಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾರೂ ಕೂಡಾ ಮನೆಯಿಂದ ಹೊರಗೆ ಬರಬಾರದು. ಅದರಂತೆ ಯಾರೊಬ್ಬರು ಹಸಿವಿನಿಂದ ಇರಬಾರದು. ಹಾಗಾಗಿ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಎಲ್ಲರ ಮನೆಮನೆಗೂ ತಲುಪಿಸುವಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ, ಜನರು ತಮ್ಮ ಮನೆಯ ಮುಂದೆ ಬಂದಂತಹ ವಾಹನದಲ್ಲಿ ತಮಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಖರೀದಿಸಬೇಕು. ಮಾರಾಟ ಮಾಡುವ ವ್ಯಾಪಾರಸ್ಥರು ಕೂಡ ಅಗತ್ಯಕ್ಕಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು ಎಂದು ಸೂಚಿಸಿದರು.

Last Updated : Apr 2, 2020, 11:23 AM IST

ABOUT THE AUTHOR

...view details