ಕರ್ನಾಟಕ

karnataka

ETV Bharat / state

ಯತ್ನಾಳ್ ನಮ್ಮ ಪಕ್ಷದಲ್ಲೇ ಇದ್ದಾರೆ, ಇಷ್ಟರಲ್ಲೇ ಎಲ್ಲವೂ ಸರಿಯಾಗಲಿದೆ: ಸೋಮಣ್ಣ ವಿಶ್ವಾಸ - Minister V Somanna

ಸದಾ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಬುಸುಗುಡುತ್ತಿರುವ ವಿಜಯಪುರ ನಗರ ಶಾಸಕ ಯತ್ನಾಳ್ ನಿವಾಸಕ್ಕೆ ಸಿಎಂ ಆಪ್ತ ವಸತಿ ಸಚಿವ ವಿ. ಸೋಮಣ್ಣ ಧೀಡಿರ್​​ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಈ ಭೇಟಿಯ ಕುರಿತು ಸೋಮಣ್ಣ ಸ್ಪಷ್ಟನೆ ನೀಡಿದ್ದು, ಸಿಎಂ ಬಿಎಸ್​​​ವೈ ಆದೇಶದಂತೆ ಭೇಟಿಯಾಗಿದ್ದೇನೆ ಎಂದಿದ್ದಾರೆ.

Minister V Somanna
ಸಚಿವ ವಿ ಸೋಮಣ್ಣ

By

Published : Nov 13, 2020, 12:53 PM IST

ಮೈಸೂರು:ಶಾಸಕ ಬಸನಗೌಡ ಪಾಟೀಲ್ಯತ್ನಾಳ್ ನಮ್ಮ ಪಕ್ಷದಲ್ಲೇ ಇದ್ದಾರೆ, ಸಣ್ಣ ಪುಟ್ಟ ಗೊಂದಲಗಳನ್ನು ಸರಿ ಮಾಡಿಕೊಳ್ಳುವುದಕ್ಕೆ ಚಾಲನೆ ಕೊಟ್ಟಿದ್ದೇವೆ. ಎಲ್ಲವೂ ಸರಿಹೋಗುತ್ತದೆ ಎಂದು ಸಚಿವ ವಿ.ಸೋಮಣ್ಣ ಯತ್ನಾಳ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್​​​ ಯತ್ನಾಳ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ

ನಮ್ಮ ಇಲಾಖೆಯ ಕಾರ್ಯಕ್ರಮ ಅವರ ಕ್ಷೇತ್ರದಲ್ಲಿ 6 ತಿಂಗಳ ಹಿಂದೆಯೇ ನಡೆಬೇಕಿತ್ತು. ಆ ಕಾರ್ಯಕ್ರಮದ ಬಗ್ಗೆ ಅದರ ಆಯೋಜನೆ ಮಾತನಾಡಲು ಹೋಗಿದ್ದೆ, ಯತ್ನಾಳ್ ನಮ್ಮ ಪಕ್ಷದಲ್ಲೇ ಇದ್ದಾರೆ. ಸಣ್ಣ ಪುಟ್ಟ ಗೊಂದಲಗಳು, ವ್ಯತ್ಯಾಸಗಳು ಇವೆ. ಅದನ್ನು ಸರಿಪಡಿಸಿಕೊಂಡು ಹೋಗಲು ಈಗಾಗಲೇ ಚಾಲನೆ ನೀಡಿದ್ದೇವೆ, ಎಲ್ಲವೂ ಸರಿಹೋಗುತ್ತದೆ ಎಂದರು.

ಯಡಿಯೂರಪ್ಪ ಅವರು ನಮ್ಮ ಪಕ್ಷದ ನಾಯಕರು, ನಾನು ಒಬ್ಬ ಮಂತ್ರಿ, ಅವರ ಆದೇಶದಂತೆ ನಾವು ಕೆಲಸ ಮಾಡುತ್ತೇವೆ. ಯತ್ನಾಳ್ ಕೂಡ ಬುದ್ದಿವಂತರು, ಯತ್ನಾಳ್ ಕ್ಷೇತ್ರಕ್ಕೆ ಯಡಿಯೂರಪ್ಪ ಅವರು ನೂರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. 525 ಕಿಲೋ ಮೀಟರ್ ಪ್ರಯಾಣ ಮಾಡಿ ಯತ್ನಾಳ್ ಅವರನ್ನು ಭೇಟಿ ಮಾಡಿದ್ದೇನೆ ಎಂದರು.

ಬಿಜೆಪಿಯಲ್ಲಿ ಯಾರಿಗೂ ಅನ್ಯಾಯ ಮಾಡುವ ಅವಕಾಶವೇ ಇಲ್ಲ, ಎಲ್ಲರಿಗೂ ನ್ಯಾಯ ಸಿಗುತ್ತದೆ, ಯಡಿಯೂರಪ್ಪ ಅವರು ಹೇಳಿದ್ದರು ಎಂದು ನಾನು ಹೋಗಿದ್ದೆ, ಎಲ್ಲವೂ ಸರಿಹೋಗುತ್ತದೆ ಯಾರು ತಲೆಕಡೆಸಿಕೊಳ್ಳಬೇಡಿ ಎಂದಿದ್ದಾರೆ.

ABOUT THE AUTHOR

...view details