ಕರ್ನಾಟಕ

karnataka

ETV Bharat / state

ಪದೇ ಪದೆ ನನ್ನನ್ನು ಕೆಣಕಬೇಡಿ ಸಿದ್ದು ವಿರುದ್ಧ ಸೋಮಣ್ಣ ಗರಂ - v somanna press meet in mysore

ನಾನು ನೀವು ಒಂದೇ ಗರಡಿಯಲ್ಲಿ ಇದ್ದವರು ನೀವು ಅದೃಷ್ಟದಿಂದ ಸಿಎಂ ಆದಿರಿ, ನನಗೂ ಎಲ್ಲ ಅರ್ಹತೆ ಇದೆ ಎಂದು ವಸತಿ ಸಚಿವ ವಿ. ಸೋಮಣ್ಣ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ವಸತಿ ಸಚಿವ ಸೋಮಣ್ಣ
ವಸತಿ ಸಚಿವ ಸೋಮಣ್ಣ

By

Published : Feb 12, 2022, 1:41 PM IST

ಮೈಸೂರು: ನೂರು ಬಾರಿ ಸುಳ್ಳು ಹೇಳಿದರು ಅದು ಸತ್ಯ ಆಗುವುದಿಲ್ಲ. ನನ್ನನ್ನು ಪದೇ ಪದೆ ಕೆಣಕಬೇಡಿ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಗರಂ ಆಗಿ‌ ಉತ್ತರ ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮನೆ ನೀಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆಗಿ ಉತ್ತರಿಸಿದ ಸಚಿವ ಸೋಮಣ್ಣ. ಪದೇ ಪದೆ ನನ್ನನ್ನ ಕೆಣಕಬೇಡಿ ನೂರು ಬಾರಿ ಸುಳ್ಳು ಹೇಳಿದರು ಅದು ಸತ್ಯ ಆಗುವುದಿಲ್ಲ ಈ ವಿಚಾರವಾಗಿ ನಿಮ್ಮ ಕ್ಷೇತ್ರ ಬಾದಾಮಿಗೆ ಬಂದು ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ, ನೀವು ಸಿದ್ದರಿದ್ದೀರಾ? ಎಂದು ಪ್ರಶ್ನೆ ಮಾಡಿದರು.

ವಸತಿ ಸಚಿವ ಸೋಮಣ್ಣ ಸಿದ್ದರಾಮಯ್ಯ ಅವರ ಮಾತಿಗೆ ಕಿಡಿಕಾರಿದರು

‌ನಾನು ನೀವು ಒಂದೇ ಗರಡಿಯಲ್ಲಿ ಇದ್ದವರು ನೀವು ಅದೃಷ್ಟದಿಂದ ಸಿಎಂ ಆದಿರಿ, ನನಗೂ ಎಲ್ಲ ಅರ್ಹತೆ ಇದೆ ಎಂದರು. ನಾಲಿಗೆ ಮೇಲೆ ಹಿಡಿತವಿರಲಿ ಎಲ್ಲರನ್ನೂ ಒಂದೇ ರೀತಿ ನೋಡಬೇಡಿ. ನೀವು ಸಿಎಂ ಆಗಿದ್ದಾಗ ಅಂದರೆ ಸುಡುಗಾಡು ಸಿದ್ದರು ಮಾಡಿದ್ದನ್ನ ನಾವು ಈಗ ಸರಿ ಪಡಿಸುತ್ತಿದ್ದೇವೆ.

ನಿಮ್ಮ ಕಾಲದಲ್ಲಿ ಬರಿ ಘೋಷಣೆ ಮಾಡಿದ್ದೀರಿ ನಾವು ಈಗ ಮನೆ ಕಟ್ಟುತ್ತಿದ್ದೇವೆ. ಮನೆ ಕಟ್ಟುವುದು ನಿರಂತರ ಪ್ರಕ್ರಿಯೆಯಾಗಿದ್ದು ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡಬೇಡಿ ನೀವು ಸಹ ನಿಮ್ಮ ಮನೆಯಿಂದ ತಂದುಕೊಟ್ಟಿಲ್ಲ ನಾನು ಸಹ ನನ್ನ ಮನೆಯಿಂದ ತಂದುಕೊಡುವುದಿಲ್ಲ ಜನರಿಗೆ ಮನೆ ಸಿಗಬೇಕು. ನನ್ನನ್ನು ಟಾರ್ಗೆಟ್ ಮಾಡುವುದನ್ನು ಬಿಡಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಸಚಿವರು: ಇಲ್ಲಿ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎನ್ನುವುದನ್ನ ಸರ್ಕಾರ ಗಂಭೀರವಾಗಿ ಗಮನಿಸುತ್ತಿದೆ.‌ ಇಲ್ಲಿ ಯಾರು ದೊಡ್ಡವರಲ್ಲ ಎಲ್ಲಕ್ಕಿಂತ ದೇಶ ದೊಡ್ಡದು. ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ಸಂಘಟನೆಗಳನ್ನ ಬಗ್ಗು ಬಡಿಯುವ ಕೆಲಸವನ್ನ ಸರ್ಕಾರ ಮಾಡಲಿದೆ.‌‌

ಭಾರತದ ಮೇಲೆ 17 ಬಾರಿ ದಂಡಯಾತ್ರೆ ಮಾಡಿದರು, ಇಲ್ಲಿನ ರಾಜರನ್ನ ಸೋಲಿಸಿದರು, ಭಾರತ ಭಾರತವಾಗಿಯೇ ಇದೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡ ಬೇಡಿ ಎಂದು ವಸತಿ ಸಚಿವ ಸೋಮಣ್ಣ ಹೇಳಿಕೆ ನೀಡಿದರು.

ಇದನ್ನೂ ಓದಿ:ಹಿಜಾಬ್ ವಿವಾದ ನಮ್ಮ ಆಂತರಿಕ ವಿಚಾರ, ಅಭಿಪ್ರಾಯ ಹೊರಹಾಕುವುದು ಸರಿಯಲ್ಲ: ರಾಷ್ಟ್ರಗಳಿಗೆ ವಿದೇಶಾಂಗ ಇಲಾಖೆ ಸೂಚನೆ

For All Latest Updates

ABOUT THE AUTHOR

...view details