ಮೈಸೂರು: ಮಾವುತ-ಕಾವಾಡಿಗರ ಸಮಸ್ಯೆ ಬಗೆ ಹರಿದಿದೆ. ಒಳ್ಳೆಯ ರೀತಿ ದಸರಾ ಆರಂಭವಾಗಲಿ ಎಂದು ಗಜ ಪಡೆಗೆ ಪೂಜೆ ಸಲ್ಲಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಗಜ ಪಯಣಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಇಂದು ವೀರನ ಹೊಸಹಳ್ಳಿಯ ಬಳಿ ಗಜ ಪಯಣಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವರು ಉಮೇಶ್ ಕತ್ತಿ, 30 ವರ್ಷಗಳಿಂದ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಆಸೆಯಿತ್ತು. ಅದರಂತೆ ಇಂದು ಈ ಬಾರಿ ದಸರಾ ಗಜಪಡೆಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗಿದೆ. ಮಾವುತ ಹಾಗೂ ಕಾವಾಡಿಗರ ಸಮಸ್ಯೆ ಬಗೆಹರಿದಿದೆ ಎಂದರು.