ಮೈಸೂರು: ವ್ಯಾಕ್ಸಿನ್ ವಿಚಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪ್ರಸಾದ್ ಅವರಿಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾರ್ನಿಂಗ್ ಮಾಡಿದ ಘಟನೆ ಇಂದು ನಗರದಲ್ಲಿ ನಡೆದಿದೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸುವಾಗ, ವರದಿ ನೀಡಲು ಮುಂದಾದ ಡಿಎಚ್ ಒ ಪ್ರಸಾದ್ ಅವರಿಗೆ, ವ್ಯಾಕ್ಸಿನ್ ವಿಚಾರದಲ್ಲಿ ನೀವು ಪ್ರೆಸ್ ನೋಟ್ ರಿಲೀಸ್ ಮಾಡಕೂಡದು. ಅದೆಲ್ಲವನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ತಾರೆ ಎಂದು ಸಭೆಯ ಆರಂಭದಲ್ಲೇ ಎಚ್ಚರಿಕೆ ನೀಡಿದರು.