ಕರ್ನಾಟಕ

karnataka

ETV Bharat / state

ರೋಷನ್ ಬೇಗ್ ಬಿಜೆಪಿ ನಂಬಿ ಬರಲಿಲ್ಲ: ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ - ಎಸ್.ಟಿ.ಸೋಮಶೇಖರ್

ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ಒಳ ಬೇಗುದಿಗೆ ಬೇಸತ್ತು, ರಾಜೀನಾಮೆ ಕೊಟ್ಟಿದ್ದಾರೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

Minister ST Somashekhar
ಸಚಿವ ಎಸ್.ಟಿ.ಸೋಮಶೇಖರ್

By

Published : Nov 24, 2020, 1:25 PM IST

ಮೈಸೂರು:ರೋಷನ್ ಬೇಗ್ ನೂರಕ್ಕೆ ನೂರರಷ್ಟು ಬಿಜೆಪಿ ನಂಬಿ ಬರಲಿಲ್ಲ, ಬಿಜೆಪಿಯಿಂದ ಟಿಕೆಟ್ ಬೇಕು ಎಂದಿದ್ದರೆ ಶಿವಾಜಿನಗರದಿಂದ ಸಿಗುತ್ತಿತ್ತು , ಅವರು ಬಿಜೆಪಿ ನಂಬಿ ಬಂದಿರಲಿಲ್ಲ, ಕಾಂಗ್ರೆಸ್​ನ ಒಳಬೇಗುದಿಯಿಂದ ಬೇಸತ್ತು ಬಂದಿದ್ದಾರೆ ಅಷ್ಟೇ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಸಚಿವ ಎಸ್.ಟಿ.ಸೋಮಶೇಖರ್

ಇಂದು ಜಿಲ್ಲಾ ಮಟ್ಟದ ಅಧಿಕಾರಗಳ ಸಭೆಯಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ವೇಳೆ ಮಾತಮಾಡಿದ ಅವರು, ರೋಷನ್ ಬೇಗ್ ಅವರು ಟಿಕೆಟ್ ಬೇಕು ಎಂದು ಕೇಳಿದರೆ ಶಿವಾಜಿನಗರಿಂದ ಟಿಕೆಟ್ ಸಿಗುತ್ತಿತ್ತು. ಆದರೆ, ಅವರು ಬಿಜೆಪಿ ಟಿಕೆಟ್ ಕೇಳಲಿಲ್ಲ, ಐಎಂಎ ಕೇಸ್​ನಲ್ಲಿ ಅವರನ್ನು ಕರೆದುಕೊಂಡು ಹೋಗಿ ತನಿಖೆ ಮಾಡುತ್ತಿದ್ದಾರೆ, ಏನು ಇಲ್ಲ ಎಂದರೆ ಬಿಟ್ಟು ಬಿಡುತ್ತಾರೆ. ನಮ್ಮ ಬಾಂಬೆ ಟೀಮ್​​ನಲ್ಲಿ ಅವರು ಇರಲಿಲ್ಲ , ಕಾಂಗ್ರೆಸ್ ಪಕ್ಷದ ಒಳಬೇಗುದಿಗೆ ಬೇಸತ್ತು, ರಾಜೀನಾಮೆ ಕೊಟ್ಟಿದ್ದಾರೆ. ಈಗ ಐಎಂಎ ಕೇಸ್ ನಲ್ಲಿ ತಪ್ಪಿತಸ್ಥರಲ್ಲ ಎಂದರೆ ಕ್ಲೀನ್ ಚಿಟ್ ಆಗಿ ಹೊರಬರುತ್ತಾರೆ ಎಂದರು.

ಯಡಿಯೂರಪ್ಪ ನುಡಿದಂತೆ ನಡೆಯಲಿದ್ದು, ನಮಗೆಲ್ಲ ಟಿಕೆಟ್ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಸೋತಿದ್ದವರನ್ನು ಎಂ​ಎಲ್​ಸಿ ಮಾಡಿದ್ದಾರೆ, ಈಗ ಅವರನ್ನು ಮಂತ್ರಿ ಮಾಡಲು ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ನಾವು ಎಲ್ಲರೂ ಒಟ್ಟಾಗಿದ್ದೇವೆ. ಯಾರೋ ಒಬ್ಬರು ಇಬ್ಬರು ಶೋ ಕೊಡುವುದಕ್ಕೆ ಹೊರಟಿದ್ದಾರೆ. ನಾನು ಲೀಡರ್ ನಾನು ಲೀಡರ್ ಎಂದು ಹೊರಟಿದ್ದಾರೆ ವಿನಃ ನಾವೆಲ್ಲಾ ಒಂದೇ. ನಮ್ಮಲ್ಲಿ ಬಾಂಬೆ ಟೀಮ್, ಹೊಸ ಟೀಮ್, ಹಳೆ ಟೀಮ್ ಎಂದು ಏನು ಇಲ್ಲ ಎಲ್ಲ ಒಂದೇ ಟೀಮ್ ಬಿಜೆಪಿ ಟೀಮ್ ಎಂದು ಉಸ್ತುವಾರಿ ಸಚಿವರು ಹೇಳಿದರು‌.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಎಸ್.ಟಿ.ಸೋಮಶೇಖರ್ ಹೇಳಿದ್ದೇನು ?

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈ ಕಮಾಂಡ್​ಗೆ ಸಿಎಂ ವಿವರ ನೀಡಿದ್ದಾರೆ. ಹೈ ಕಮಾಂಡ್ ಫ್ರೀ ಇಲ್ಲ ಎಂದು ಕಾಣಿಸುತ್ತದೆ, ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಮತ್ತು ಹೈ ಕಮಾಂಡ್ ತೀರ್ಮಾನ ಮಾಡುತ್ತಾರೆ ಅದು ನಮ್ಮ ಲೆವೆಲ್​ಗೆ ಬರುವುದಿಲ್ಲ ಎಂದರು.

ಇನ್ನು ರಾಜ್ಯದಲ್ಲಿ ಸರ್ಕಾರ ಉತ್ತಮ ಆಡಳಿತ ನಡೆಸಲು 6 ಡಿವಿಜನ್​ಗಳನ್ನು ಮಾಡಿದ್ದಾರೆ. ಮೈಸೂರಿಗೆ ಸಚಿವ ಆರ್.ಅಶೋಕ್ ಅವರನ್ನು ಮುಖ್ಯಸ್ಥನಾಗಿ ಮಾಡಿದ್ದು, ಅವರ ನೇತೃತ್ವದಲ್ಲಿ ನಾವೆಲ್ಲ ಅಭಿವೃದ್ಧಿ ಸಭೆ ನಡೆಸುತ್ತೇವೆ ಎಂದರು.

ABOUT THE AUTHOR

...view details