ಮೈಸೂರು: ಮಂತ್ರಿಗಳು ಶಾಸಕರಿಗೆ ಸ್ಪಂದಿಸದಿದ್ದರೆ, ಸಿಎಂ ಮಧ್ಯಪ್ರವೇಶ ಮಾಡುತ್ತಾರೆ. ಅದು ಸಿಎಂ ಪರಮಾಧಿಕಾರ ಎಂದು ರಾಜ್ಯಪಾಲರಿಗೆ ಈಶ್ವರಪ್ಪ ಪತ್ರ ಪ್ರಕರಣಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಮಾರ್ಮಿಕವಾಗಿ ಉತ್ತರ ನೀಡಿದರು.
ಇಂದು ಅಧಿಕಾರಿಗಳೊಂದಿಗಿನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಪ್ರಕರಣದಲ್ಲಿ ಕೆಲವು ಶಾಸಕರು ದೂರು ನೀಡಿದ್ದಾರೆ. ಸಿಎಂ ಹಣ ಬಿಡುಗಡೆ ಮಾಡಿದರೂ ಆರ್ಡಿಪಿಆರ್ ಅಧಿಕಾರಿಗಳು ಬಿಡುಗಡೆ ಮಾಡಿಲ್ಲವೆಂದು ದೂರಿದ್ದಾರೆ. ಅದಕ್ಕೆ ಸಿಎಂ ಮಧ್ಯಪ್ರವೇಶ ಮಾಡಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು.